ಚಿತ್ರದುರ್ಗ: ವಿಜಯ ದಶಮಿ ಅಂಗವಾಗಿ ಗುರುವಾರ ಅತ್ತ ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತಿದ್ದರೆ ಇತ್ತ ಶರಣ ಸಂಸ್ಕೃತಿ ಉತ್ಸವದಲ್ಲಿ ಜಾನಪದ ಕಲಾ ಮೇಳ ವೈಭವಯುತವಾಗಿ ನೆರವೇರಿತು.

ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ಕಳೆದೊಂದು ವಾರದಿಂದ ವೈವಿಧ್ಯಮಯವಾದ ಚಟುವಟಿಕೆಗಳು ನಡೆಯುತ್ತಿದ್ದು ವಿಜಯ ದಶಮಿ ಅಂಗವಾಗಿ ಜಾನಪದ ಕಲಾ ತಂಡಗಳ ಮೆರವಣಿಗೆ ವಿಶೇಷ ಕಳೆ ಕಟ್ಟಿತು. ರಾವಂದೂರು ಮೋಕ್ಷಪತಿ ಶ್ರೀಗಳು, ಬಸವಪ್ರಭು ಶ್ರೀಗಳು ಕಲಾ ಮೇಳಕ್ಕೆ ಚಾಲನೆ ನೀಡಿದರು.

ನಗರದ ಆರ್ಎಚ್ ಜಿನ್ನಿಂಗ್ ಮಿಲ್ ಬಳಿಯಿಂದ ಹೊರಟ ಮೆರವಣಿಗೆ ಬಿ.ಡಿ ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವ ಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಮೇಲುದುರ್ಗದತ್ತ ಸಾಗಿತು. ಬೃಹನ್ಮಠದ ಸಂಪ್ರದಾಯದಂತೆ ಮೇಲುದುರ್ಗದಲ್ಲಿರುವ ಮರುಘಾ ಮಠದಲ್ಲಿ ನಾಯಕ ಅರಸರ ವಂಶಸ್ಥರಿಂದ ಸ್ವಾಮೀಜಿಗಳು ಸನ್ಮಾನ ಸ್ವೀಕರಿಸಿದರು. ಜೊತೆಗೆ ವಿವಿಧ ಮಠಾಧೀಶರು ಅರಸರ ವಂಶಸ್ಥರನ್ನು ಅಭಿನಂದಿಸಿದರು.

ನಾಡಿನ ಸಾಂಸ್ಕೃತಿಕ ವೈಭವವನ್ನು ಸೂಚಿಸುವ ವಿವಿಧ ರೀತಿಯ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು. ಬಸವಾದಿ ಶರಣರ ಭಾವಚಿತ್ರಗಳು, ಶರಣರ ವಚನಗಳನ್ನು ಬಿಂಬಿಸುವ ಚಿತ್ರಪಟಗಳು, ವೇಷ ಭೂಷಣಗಳು ಗಮನ ಸೆಳೆದವು. ರಾಮ ಡೋಲ್, ಕತ್ತಿ ಗುರಾಣಿ ಕುಣಿತ, ಪುರುಷ ವಾದ್ಯ, ಮಹಿಳಾ ತಮಟೆ ವಾದ್ಯ ತಂಡಗಳ ಸದ್ದು ಮನಸೂರೆಗೊಂಡಿತು. ಎಸ್ಜೆಎಂ ವಿದ್ಯಾಪೀಠದ ವಿವಿಧ ಸಂಸ್ಥೆಗಳ ಸ್ತಬ್ಧಚಿತ್ರಗಳೂ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಡ್ರಂ ಸೆಟ್, ಕರಡಿ ಚಮಾಳ ವಾದ್ಯ, ಡೊಳ್ಳು ಕುಣಿತ, ಟಕೂರಿ ವಾದ್ಯ, ತ್ರಾಶ್ ವಾದ್ಯ, ಕಹಳೆ ತಂಡ, ಬ್ರಾಸ್ ಬ್ಯಾಂಡ್, ಗಾರುಡಿ ಗೊಂಬೆ, ನಂದಿ ಕೋಲು ಸಮಾಳ, ಝಾಂಜ್ ಮೇಳ, ಲಂಬಾಣಿ ನೃತ್ಯ, ಕುರುಬರ ಡೊಳ್ಳು, ಜಗ್ಗಲಗಿ ಮೇಳ, ಮೇಳ ವಾದ್ಯ, ಕೋಲಾಟ, ನಾಸಿಕ್ ಡೊಲ್, ವೀರಭದ್ರ ಕುಣಿತ, ಗಾಡಿ ಗೊಂಬೆ, ನಾಸಿಕ್ ಡೋಲು, ತಮಟೆ, ಮಹಿಳಾ ಡೊಳ್ಳು, ಗೊರವರ ಕುಣಿತ, ಹಲಿಗೆ ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

‘ವಿಶ್ವ ಸಾಂಸ್ಕೃತಿಕ ಇತಿಹಾಸದಲ್ಲಿ ಬಸವಾದಿ ಶರಣರ ಸಾಮಾಜಿಕ ಚಳವಳಿ ಅತ್ಯಂತ ಪ್ರಮುಖವಾದುದು. ವರ್ಣ, ವರ್ಗ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆ, ಅಸಹಿಷ್ಣುತೆ, ಮೌಢ್ಯಾಚರಣೆಗಳಿಗೆ ಬಸವಾದಿ ಶರಣರು ವೈಚಾರಿಕ ನಿಲುವುಳಿಂದ ಉತ್ತರ ನೀಡಿದ್ದಾರೆ. ಶರಣಸಂಸ್ಕೃತಿ ಮತ್ತು ವಚನ ಸಾಹಿತ್ಯಗಳು ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ಅವಳಿ ಆಸ್ತಿಗಳು ಇದ್ದಂತೆ. ಈ ಪರಂಪರೆಯಲ್ಲಿ ಸಾಗಿ ಬಂದಿರುವ ಮುರುಘರಾಜೇಂದ್ರ ಬೃಹನ್ಮಠವು ಪ್ರತಿವರ್ಷ ಶರಣ ಸಂಸ್ಕೃತಿ ಉತ್ಸವವನ್ನು ಆಚರಿಸುತ್ತಾ ಬಂದಿದೆ’ ಎಂದು ಜಾನಪದ ಮೇಳದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

‘ಮುರಿಗೆ ಶಾಂತವೀರಸ್ವಾಮಿಗಳು ಬಸವಧರ್ಮ, ಸಮಾಜ, ಸಂಸ್ಕೃತಿಗಳ ಕಾರಣಕ್ಕಾಗಿ ಶ್ರಮಿಸಿದ ಮಹಾತಪಸ್ವಿಗಳಾಗಿದ್ದಾರೆ. ಬಸವಾದಿ ಶರಣರ ತತ್ವ ಸಂದೇಶಗಳನ್ನು ಉಳಿಸಿ ಬೆಳೆಸಿದ ಮಹಾನುಭಾವಿಯಾಗಿದ್ದಾರೆ. ಮುರಿಗೆ ಶಾಂತವೀರ ಸ್ವಾಮೀಜಿಗಳ ಪುತ್ಥಳಿಯನ್ನೂ ಶರಣ ಸಂಸ್ಕೃತಿ ಉತ್ಸವದಲ್ಲಿ ಮೆರವಣಿಗೆ ಮಾಡಲಾಗಿದೆ’ ಎಂದರು.

ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಿಂದ ಸೌರಶಕ್ತಿಯಿಂದ ವಿದ್ಯುತ್ ಹನಿನೀರಾವರಿ, ಎಸ್ಜೆಎಂ ಇಂಗ್ಲಿಷ್ ಮಾಧ್ಯಮ ಶಾಲೆಯಿಂದ ದುರ್ಗದ ಐತಿಹಾಸಿಕ ಸ್ಥಳ, ವಸತಿಯುಕ್ತ ಶಾಲೆಯ ಪರಿಸರ ಮಾಲಿನ್ಯ, ಜಲಸಂರಕ್ಷಣೆ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯ ಒನಕೆ ಓಬವ್ವ, ಪದವಿ ಪೂರ್ವ ಕಾಲೇಜು (ಚಂದ್ರವಳ್ಳಿ)ಯ ಕೂಡಲಸಂಗಮ, ಬಸವಣ್ಣನವರ ಐಕ್ಯಮಂಟಪ, ಫಾರ್ಮಸಿ ಕಾಲೇಜಿನ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಸ್ತಬ್ಧಚಿತ್ರಗಳು ಗಮನ ಸೆಳೆದವು.

ನರ್ಸಿಂಗ್ ಕಾಲೇಜಿನ ಅಂಗದಾನ, ಪಾಲಿಟೆಕ್ನಿಕ್ ಸೋಲಾರ್ ಘಟಕ, ಪದವಿ ಕಾಲೇಜಿನಿಂದ ಅನುಭವ ಮಂಟಪ ಮತ್ತು ಅಲ್ಲಮ ಪ್ರಭು ಶಿವಶರಣರು, ವೈದ್ಯಕೀಯ ಕಾಲೇಜಿನ ಆರೋಗ್ಯ ಕಾಳಜಿ, ದಂತ ಮಹಾವಿದ್ಯಾಲಯದ – ನಶೆ ಮುಕ್ತ ಅಭಿಯಾನ, ಮಹಿಳಾ ಕಾಲೇಜಿನ ಜೈಜವಾನ್, ಜೈಕಿಸಾನ್ , ಕಾನೂನು ಕಾಲೇಜಿನಿಂದ ಕಾನೂನು ಜಾಗೃತಿ, ಬೃಹನ್ಮಠ ಪ್ರೌಢಶಾಲೆಯ ಬಸವಣ್ಣನವರ ಐಕ್ಯಮಂಟಪ ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು.

ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಸ್ವಾಮಿ, ಮಾದಾರ ಚನ್ನಯ್ಯ ಸ್ವಾಮೀಜಿ, ಗುರುಮಠಕಲ್ ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಬಸವ ರಮಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಶ್ರೀ, ಮುರುಘೇಂದ್ರ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮುಖಂಡರಾದ ಎಸ್.ಎನ್. ಚಂದ್ರಶೇಖರ್ ಇದ್ದರು.

ಇಂದು ಜಂಗೀ ಕುಸ್ತಿ ಸಮಾರೋಪ

ಸೆ. 25ರಂದು ಆರಂಭವಾದ ಶರಣ ಸಂಸ್ಕೃತಿ ಉತ್ಸವಕ್ಕೆ ಶುಕ್ರವಾರ ವಿವಿಧ ಕಾರ್ಯಕ್ರಮಗಳ ಮೂಲಕ ತೆರೆ ಬೀಳಲಿದೆ. ಮುಂಜಾನೆ ಎಂದಿನಂತೆ ಸಹಜ ಶಿವಯೋಗ ನಡೆಯಲಿದೆ. ನಂತರ ಮುರಿಗೆ ಶಾಂತವೀರ ಶ್ರೀಗಳ ಶೂನ್ಯ ಪೀಠೋರಹಣ ನೆರವೇರಲಿದೆ. ಶೂನ್ಯಪೀಠದ ಪ್ರಥಮ ಅಧ್ಯಕ್ಷರಾದ ಅಲ್ಲಮ ಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಜರುಗಲಿದೆ. ಬೆಳಿಗ್ಗೆ 11.30ಕ್ಕೆ ಜಯದೇವ ಜಂಗಿಕುಸ್ತಿ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಸಮಾರಂಭದಲ್ಲಿ ಶಾರದಾ ಬ್ರಾಸ್ ಬ್ಯಾಂಡ್ನ ಎಸ್.ವಿ ಗುರುಮೂರ್ತಿ ಹಾಸನದ ಯುನೈಟೆಡ್ ಅಕಾಡೆಮಿಯ ಸಿ.ಎಂ.ಚಂದ್ರಶೇಖರ್ ಅವರಿಗೆ ಸನ್ಮಾನ ನಡೆಯಲಿದೆ. ಧಾರವಾಡದ ವಿದುಷಿ ವಿಜೇತ ವರ್ಣಿಕರ್ ಮತ್ತು ತಂಡದವರಿಂದ ಕಥಕ್ ನೃತ್ಯ ವೈಭವ ಕೊಪ್ಪಳದ ನಾಗರಾಜ್ ಶ್ಯಾವಿ ಕೊಳಲು ವಿದುಷಿ ಟಿ.ಭವ್ಯರಾಣಿ ಅವರಿಂದ ವೈಲಿನ್ ವಾದನ ಗೋವಾದ ಪ್ರಸಾದ್ ಮಡಿವಾಳರ್ ತಬಲ ವಾದ್ಯಗೋಷ್ಠಿ ನಡೆಯಲಿದೆ. ನಗರದ ಪರಮರತ್ನಸಂಗೀತ ಸಂಸ್ಥೆ ವತಿಯಿಂದ ಸಂಗೀತ ಕಾರ್ಯಕ್ರಮ ಸರಿಗಮಪ ಖ್ಯಾತಿಯ ಗಾಯಕಿ ಶರಧಿ ಪಾಟೀಲ ಗಾಯಕರಾದ ಖಾಸಿಂ ನಂದಿನಿ ಕೆ.ಗಂಗಾಧರ್ ಭಾಗ್ಯಗಂಗಾಧರ್ಆಂಜಿನಪ್ಪ ಹಿಮಂತ್ರಾಜ್ ಭಾರ್ಗವಿ ಶಮೀರ್ ಸಂಗೀತ ಕಾರ್ಯಕ್ರಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.