ಬುಧವಾರ, ಆಗಸ್ಟ್ 10, 2022
24 °C

ಹಿರಿಯೂರು ರೈತ ಬೆಳೆದಿದ್ದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಎಂಬುವರು ಬೆಳೆದಿದ್ದ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರು ಹಂಚಿಕೊಂಡ ಫೋನ್ ‌ನಂಬರ್ ಸಂಪರ್ಕ ಮಾಡಿದ ರೈತನಿಗೆ ಅನುಕೂಲವಾಗಿದೆ. ಲಾಭದ ನಿರೀಕ್ಷೆ ಇಲ್ಲದೆ ಈರುಳ್ಳಿ ಮಾರಾಟ ಮಾಡಿದ್ದಾರೆ.

'ನಮಗೆ ಅವಶ್ಯಕತೆ ಇರುವ ಬೆಳೆಯನ್ನು ರೈತರಿಂದ ಸೂಕ್ತ ಬೆಲೆಗೆ ಖರೀದಿಸಿ ಬೇಕಿರುವವರಿಗೆ ಹಂಚುತ್ತೇವೆ' ಎಂದು ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಜೊತೆಗೆ ಮೊಬೈಲ್ ಫೋನ್ ನಂಬರ್ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್, ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು.

ಈರುಳ್ಳಿಯನ್ನು ಬೆಂಗಳೂರಿಗೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. 60 ಚೀಲಕ್ಕೆ ಬಾಡಿಗೆ ಸೇರಿಸಿ ₹ 37 ಸಾವಿರ ಸಿಕ್ಕೆದೆ. ಸಂಕಷ್ಟದಲ್ಲಿದ್ದ ರೈತ ಸಂತಸಗೊಂಡಿದ್ದಾನೆ.

'ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 70 ಚೀಲ ಈರುಳ್ಳಿಯಲ್ಲಿ 10 ಚೀಲ ಕೊಳೆತು ಹೋಗಿತ್ತು. ಉಳಿದ ಈರುಳ್ಳಿ ಮಾರಾಟ ಮಾಡಲು ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಸಂಗ್ರಹಿಸಿ ಇಟ್ಟಿದ್ದೆವು. ಉಪೇಂದ್ರ ಅವರು ಹಾಕಿದ್ದ ಪೋಸ್ಟ್ ನೋಡಿ ಸಂಪರ್ಕಿಸಿದೆ. ಅವರೂ ಸ್ಪಂದಿಸಿದರು. ಲಾಭಕ್ಕಿಂತ ಈ ಬೆಲೆ ಸಿಕ್ಕಿರುವುದು ಖುಷಿಯಾಗಿದೆ' ಎಂದು ರೈತ ಮಹೇಶ್ ಸಂತಸ ಹಂಚಿಕೊಂಡಿದ್ದಾರೆ.

'ನಮ್ಮ ಬಳಿ ಖರೀದಿಸಿದ ಈರುಳ್ಳಿಯನ್ನು ಅವರು ಕಾರ್ಮಿಕರಿಗೆ ಹಂಚುತ್ತಿರುವುದು ತುಂಬಾ ಖುಷಿಯಾಯಿತು. ಇಂತಹ ಸಂದರ್ಭದಲ್ಲಿ ಅವರು ಮಾಡುವ ಸಾಮಾಜಿಕ ಕಾರ್ಯಕ್ಕೆ ನಮಗೆ ಲಾಭ ಬೇಡ ಅನ್ನಿಸಿತು. ರೈತರಿಗೆ ಅನುಕೂಲ ಆಗಲಿ ಎಂದು ಮುಂದೆ ಬಂದಿರುವುದು ಸಂತಸ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ಬೆಲೆ ಸಿಗುತ್ತಿರಲಿಲ್ಲ' ಎಂದು ಮಹೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು