ಧರ್ಮಪುರ: ‘ಕನ್ನಡ ಅನ್ನ ಕೊಡುವ, ಬದುಕು ನೀಡುವ ಭಾಷೆಯಾಗಲು ಪ್ರಭುತ್ವದ ಪಾತ್ರ ಅತ್ಯಂತ ಮಹತ್ವವಾದದ್ದು’ ಎಂದು ಸಾಹಿತಿ ಜಡೇಕುಂಟೆ ಮಂಜುನಾಥ್ ಅಭಿಪ್ರಾಯಪಟ್ಟರು.

ಸಮೀಪದ ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಲಾರಂಭಿಸಿದ ಕಾಲಘಟ್ಟದಲ್ಲಿ ಇಂಗ್ಲಿಷ್ ಕಲಿತವರಿಗೆ ಹೆಚ್ಚು ಉದ್ಯೋಗ ಸಿಗಲಾರಂಭಿಸಿದಾಗ ಆ ಭಾಷೆಯ ಮೇಲಿನ ವ್ಯಾಮೋಹ ಜಾಸ್ತಿಯಾಯಿತು. ಇದರಿಂದ ಕನ್ನಡ ಅಭಿಮಾನದ ಪ್ರಶ್ನೆ ಜಾಗೃತವಾಯಿತು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನ್ಯ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಮಾತೃ ಭಾಷೆ ಕಡೆಗಣಿಸಬಾರದು’ ಎಂದರು.

‘ಬೇರೆ ಯಾವುದೇ ರಾಜ್ಯಗಳಿಗೆ ನಾವು ಹೋದರೆ ಅವರು ಅಲ್ಲಿಯ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ, ನಾವು ಕನ್ನಡಿಗರು ಕನ್ನಡವನ್ನು ಮರೆತಿದ್ದೇವೆ. ಇಂದಿನ ಪೀಳಿಗೆ ಇದನ್ನು ಗ್ರಹಿಸಬೇಕು’ ಎಂದು ಪ್ರೌಢಶಾಲೆ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ಹೇಳಿದರು.

ಉಪ ಪ್ರಾಂಶುಪಾಲ ಎಂ.ಜಿ.ರುದ್ರಮುನಿ, ಎಸ್ಡಿಎಂಸಿ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿದರು.

ಸುಭಾನ್ ಸಾಬ್, ವಿಜಯಕುಮಾರ್, ತಿಪ್ಪೇಸ್ವಾಮಿ, ಪುಷ್ಪಾವತಿ, ಬಿ.ಬಿ.ಜಾನ್, ಭಾಗ್ಯಮ್ಮ, ರಮೇಶ್, ಸಪ್ತಗಿರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.