‘ಸಂಚಾರ ದಟ್ಟಣೆ ನಿಯಂತ್ರಣ ಪೊಲೀಸರ ಕರ್ತವ್ಯ. ಸಿಬ್ಬಂದಿ ಕೊರತೆ ಕಾರಣಕ್ಕೆ ಸಾರ್ವಜನಿಕರಿಗೆ ಶಿಕ್ಷೆ ವಿಧಿಸುವುದು ಎಷ್ಟು ಸರಿ? ಈಗಾಗಲೇ ಒಮ್ಮೆ ಬಸ್ ಸಂಚಾರ ಸ್ಥಗಿತಗೊಳಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈಗ ಮತ್ತೆ ಅವೈಜ್ಞಾನಿಕ ಕ್ರಮ ಜಾರಿಗೊಳಿಸಿರುವುದು ಸರಿಯಲ್ಲ. ಕೂಡಲೇ ಬಿ.ಡಿ ರಸ್ತೆಯಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಿಸದಿದ್ದರೆ ಸಂಚಾರ ಠಾಣೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಎಚ್ಚರಿಸಿದರು.
ಆಂಬುಲೆನ್ಸ್ ಓಟಾಡಕ್ಕೆ ಅಡ್ಡಿ
ಬಸವೇಶ್ವರ ಆಸ್ಪತ್ರೆ ಮುಂದಿನ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಬಸ್‌ಗಳು ನುಗ್ಗುತ್ತಿರುವ ಕಾರಣ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳ ಓಡಾಟಕ್ಕೆ ತೊಂದರೆಯಾಗಿದೆ. ಚಳ್ಳಕೆರೆ ಗೇಟ್‌ನಿಂದ ಆಸ್ಪತ್ರೆವರೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ಆಂಬುಲೆನ್ಸ್‌ಗಳು ಬರಲು ಪರದಾಡುವಂತಾಗಿದೆ. ಜೊತೆಗೆ ಸಮೀಪದಲ್ಲೇ ಡಾನ್ ಬಾಸ್ಕೊ ಶಾಲೆಯಿದ್ದು ಮಕ್ಕಳ ಜೀವಕ್ಕೂ ಅಪಾಯ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.