ಚಿತ್ರದುರ್ಗ: ‘38 ತಿಂಗಳ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆ. 5ರಿಂದ ಕೆಎಸ್ಆರ್ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ’ ಎಂದು ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಜಿ.ಸಿ.ಸುರೇಶ್ಬಾಬು ತಿಳಿಸಿದರು.

‘ಶಕ್ತಿ ಯೋಜನೆ ಯಶಸ್ವಿಯಾಗಲು ಕೆಎಸ್ಆರ್ಟಿಸಿ ಸಿಬ್ಬಂದಿಗಳ ಪರಿಶ್ರಮವಿದೆ. ಚಾಲಕರು, ನಿರ್ವಾಹಕರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. 38 ತಿಂಗಳ ಬಾಕಿ ವೇತನ ಕೇಳಿದರೆ ಎಸ್ಮಾ ಜಾರಿಗೊಳಿಸಿ ಕ್ರಮ ಕೈಗೊಳ್ಳುತ್ತೇವೆಂದು ರಾಜ್ಯ ಸರ್ಕಾರ ಬೆದರಿಕೆ ಹಾಕುತ್ತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ರಾಜ್ಯದಲ್ಲಿ 14,00 ಸಿಬ್ಬಂದಿ ಕೊರತೆಯಿದೆ. 4,000ಬಸ್ಗಳು ಕಡಿಮೆಯಿದೆ. ಇರುವುದರಲ್ಲೇ ಸುಧಾರಿಸಿಕೊಂಡು ಸಾರಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಿಸಬೇಕು. ಆದರೆ ಯಾವುದೇ ಸೌಲಭ್ಯಗಳು ನಮಗೆ ದೊರಕುತ್ತಿಲ್ಲ’ ಎಂದು ಫೆಡರೇಷನ್ ಉಪಾಧ್ಯಕ್ಷ ರಹೀಂಸಾಬ್ ಅಳಲು ತೋಡಿಕೊಂಡಿರು.

ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಆರ್.ಉಮಾಪತಿ, ಓಂಕಾರಪ್ಪ, ಮೂರ್ತಿನಾಯ್ಕ, ರಾಮಾಂಜನೇಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.