ಚಿತ್ರದುರ್ಗ: ಸಾರಿಗೆ ನೌಕರರ ಮುಷ್ಕರದ ಅಂಗವಾಗಿ ಮಂಗಳವಾರ ಪ್ರಯಾಣಿಕರು ಬಸ್ಗಳಿಲ್ಲದೇ ಸಂಜೆ 6 ಗಂಟೆವರೆಗೂ ಪರದಾಡಿದರು. ಸಂಜೆ ಮುಷ್ಕರ ಸ್ಥಗಿತಗೊಂಡ ಕಾರಣ ಎಂದಿನಂತೆ ಬಸ್ಗಳು ರಸ್ತೆಗಿಳಿದವು.

ರಸ್ತೆ ಸಾರಿಗೆ ನಿಗಮ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಜಿಲ್ಲೆಯ ಸಾರಿಗೆ ನೌಕರರು ಸೋಮವಾರ ಸಂಜೆಯೇ ನಗರದ ಡಿಪೊ ಎದುರು ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೂ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಜಿಲ್ಲೆಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು.

ಬಹುತೇಕ ಪ್ರಯಾಣಿಕರಿಗೆ ಮಂಗಳವಾರ ಮುಷ್ಕರ ಇರುವುದು ಗೊತ್ತೇ ಇರಲಿಲ್ಲ. ಹೈಕೋರ್ಟ್ ಮುಷ್ಕರಕ್ಕೆ ತಡೆ ನೀಡಿದ್ದ ಕಾರಣ ಬಸ್ಗಳು ಓಡಾಡುತ್ತವೆ ಎಂಬ ವಿಶ್ವಾಸದಿಂದ ಕೆಲವರು ನಿಲ್ದಾಣಕ್ಕೆ ಬಂದಿದ್ದರು. ಆದರೆ ಬಸ್ಗಳು ಸಿಗದೇ ಪ್ರಯಾಣಿಕರು ಪರದಾಡಿದರು. ಕೆಲ ಮಹಿಳೆಯರು ಶಕ್ತಿ ಯೋಜನೆ ನಂಬಿ ಹಣವನ್ನೇ ತಂದಿರಲಿಲ್ಲ. ಹೀಗಾಗಿ ಖಾಸಗಿ ಬಸ್ಗಳಲ್ಲೂ ಓಡಾಡಲು ಸಾಧ್ಯವಾಗದೇ ಸಂಜೆಯವರೆಗೂ ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು.

ಹೊಸದುರ್ಗಕ್ಕೆ ತೆರಳಬೇಕಿದ್ದ ರಂಗಮ್ಮ ಅವರು ಆಧಾರ್ ಕಾರ್ಡ್ ಮಾತ್ರ ತಂದಿದ್ದರು. ಮಗುವಿನೊಂದಿಗೆ ಬಂದಿದ್ದ ಅವರು ಬಸ್ಗಾಗಿ ಕಾದು ಸುಸ್ತಾದರು. ಖಾಸಗಿ ಬಸ್ನಲ್ಲೂ ತೆರಳದೇ ನಿಲ್ದಾಣದಲ್ಲೇ ಕಾಯುತ್ತಾ ಕುಳಿತಿದ್ದರು. ‘ಮುಷ್ಕರ ವಿಷಯ ಗೊತ್ತಿದ್ದರೆ ಹಣ ತರುತ್ತಿದ್ದೆ. ಬಸ್ ಬರುವವರೆಗೂ ಕಾದು ಊರಿಗೆ ತೆರಳುತ್ತೇನೆ’ ಎಂದು ರಂಗಮ್ಮ ತಿಳಿಸಿದರು.

ನಿದ್ದೆಗೆ ಜಾರಿದ ಜನ:

ಬಸ್ ಇಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ನಿದ್ದೆಗೆ ಜಾರಿದ್ದರು. ಕೆಲ ಯುವಕ, ಯುವತಿಯರು ಮೊಬೈಲ್ ವೀಕ್ಷಣೆ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮಹಿಳೆಯರು ತಮ್ಮ ಮಕ್ಕಳಿಗೆ ಬಸ್ ನಿಲ್ದಾಣದಲ್ಲೇ ಊಟ ತಿನ್ನಿಸುತ್ತಿದ್ದರು. ಬಸ್ ನಿಲ್ದಾಣದ ಸಮೀಪದಲ್ಲಿದ್ದ ಕ್ಯಾಂಟೀನ್, ಹೋಟೆಲ್ಗಳಿಗೆ ಭರ್ಜರಿ ವ್ಯಾಪಾರವೂ ಆಯಿತು.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯನ್ನು ಖಾಸಗಿ ಬಸ್ ಮಾಲೀಕರು, ಸಿಬ್ಬಂದಿ ಸದುಪಯೋಗ ಮಾಡಿಕೊಳ್ಳಲು ಮುಗಿಬಿದ್ದಿದ್ದರು. ಬಸ್ ನಿಲ್ದಾಣದ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ಗಳು ಸಾಲುಗಟ್ಟಿ ನಿಂತಿದ್ದವು. ಕೆಲ ಬಸ್ಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿದ್ದ ಕಾರಣ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಬೆಳಿಗ್ಗೆ ಹೊಸದುರ್ಗ, ಚಳ್ಳಕೆರೆ ಮಾರ್ಗಗಳಲ್ಲಿ ಕಚೇರಿಗೆ ತೆರಳುವ ನೌಕರರು ಬಸ್ ಹತ್ತಿ ಕುಳಿತಿದ್ದರು. ಅರ್ಧ ಗಂಟೆಯಾದರೂ ಬಸ್ ತೆರಳದ ಕಾರಣಕ್ಕೆ ಪ್ರಯಾಣಿಕರು ಬಸ್ ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ‘ಬಸ್ ಭರ್ತಿಯಾಗುವವರೆಗೂ ಬಸ್ ಚಲಿಸುವುದಿಲ್ಲ’ ಎಂದು ಸಿಬ್ಬಂದಿ ಹೇಳಿದ ನಂತರ ಪ್ರಯಾಣಿಕರು ಮೌನಕ್ಕೆ ಶರಣಾದರು. ಕೆಲವರು ಇಳಿದು ಬೇರೆ ವ್ಯವಸ್ಥೆ ಮಾಡಿಕೊಂಡು ಕಚೇರಿಗೆ ತೆರಳುತ್ತಿದ್ದರು.

ಶಿವಮೊಗ್ಗ, ದಾವಣಗೆರೆ ಕಾಲೇಜುಗಳಿಗೆ ತೆರಳಬೇಕಿದ್ದ ಕೆಲ ವಿದ್ಯಾರ್ಥಿಗಳು ಕೂಡ ಬಸ್ ಇಲ್ಲದೇ ತೊಂದರೆ ಅನುಭವಿಸಿದರು. ಕೆಲವು ವಿದ್ಯಾರ್ಥಿಗಳು ಸ್ನೇಹಿತರ ಜೊತೆಯಲ್ಲಿ ಬೈಕ್ಗಳಲ್ಲೇ ತೆರಳಿದರು. ಹತ್ತಿರದ ಮಾರ್ಗಗಳಿಗೆ ಆಟೊ ಚಾಲಕರು ಟ್ರಿಪ್ ಮಾಡಿದರು. ದರ ಹೆಚ್ಚು ನಿಗದಿ ಮಾಡಿದ್ದರೂ ಪ್ರಯಾಣಿಕರು ಮರು ಮಾತನಾಡದೇ ಹೆಚ್ಚಿಗೆ ಹಣ ಕೊಟ್ಟು ಪ್ರಯಾಣಿಸಿದರು.

‘ಸಾರಿಗೆ ನೌಕರರು ಮುಷ್ಕರ ಹೂಡುವ ಬಗ್ಗೆ ಅಧಿಕಾರಿಗಳು ಪ್ರಚಾರ ಮಾಡಬೇಕಾಗಿತ್ತು. ಹೆಚ್ಚು ಜನರಿಗೆ ಮುಷ್ಕರ ವಿಚಾರ ಗೊತ್ತಿಲ್ಲ. ಹೀಗಾಗಿ ಅನವಶ್ಯಕವಾಗಿ ಬಸ್ಗಾಗಿ ಕಾಯುವಂತಾಗಿದೆ’ ಎಂದು ಚಿಕ್ಕಜಾಜೂರಿನ ರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

70 ಮಾರ್ಗಗಳಲ್ಲಿ ಬಸ್ ಓಡಾಟ ‘ಮುಷ್ಕರ ನಡುವೆಯೂ ಜಿಲ್ಲೆಯ 4 ಡಿಪೊಗಳ 70 ಮಾರ್ಗಗಳಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚಾರ ನಡೆಸಿದವು. ಹೊರಗುತ್ತಿಗೆ ನೌಕರರು ತರಬೇತಿ ಸಿಬ್ಬಂದಿ ಕೆಲ ಹಿರಿಯ ನೌಕರರು ಕರ್ತವ್ಯಕ್ಕೆ ಹಾಜಾರಾಗಿದ್ದರು’ ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ತಿಳಿಸಿದರು. ‘ಸಂಜೆ ವೇಳೆಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು ನಿಗದಿಯಂತೆ ಬಸ್ಗಳು ಸಂಚಾರ ಮಾಡಲಿವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.