ಹೊಳಲ್ಕೆರೆ: ‘ಯಾದವ ಸಮುದಾಯಕ್ಕೆ ಹನುಮಂತ ದೇವರ ಕಣಿವೆಯಲ್ಲಿ ಮೂರು ಎಕರೆ ಜಾಗ ಕೊಟ್ಟಿದ್ದೇವೆ. ಅಲ್ಲಿನ ಬೆಟ್ಟದ ಮೇಲೆ ನೂರು ಅಡಿ ಎತ್ತರದ ಶ್ರೀಕೃಷ್ಣನ ಪ್ರತಿಮೆ ನಿರ್ಮಿಸುವ ಬಯಕೆ ಇತ್ತು. ಆದರೆ, ಯಾದವ ಸಮಾಜದ ಮುಖಂಡರು ಆಸಕ್ತಿ ತೋರಿಸುತ್ತಿಲ್ಲ. ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿ ದಿನ ಮಾತ್ರ ಈ ಬಗ್ಗೆ ಪ್ರಸ್ತಾಪಿಸಿ ಮತ್ತೆ ಮರೆಯುತ್ತೀರಿ. ಎಲ್ಲರೂ ಕೈಜೋಡಿಸಿದರೆ ಪ್ರತಿಮೆ ನಿರ್ಮಿಸಿ ಸುಂದರ ಉದ್ಯಾನ ಮಾಡಬಹುದು. ಆಗ ಅದು ಪ್ರವಾಸಿ ತಾಣವೂ ಆಗಲಿದೆ’ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಯಾದವ ಜನಾಂಗದವರು ಸಂಘಟಿತರಾಗಬೇಕು. ಆಗ ಸಮಾಜದ ಪ್ರಗತಿ ಸಾಧ್ಯ ಎಂದರು.

‘ಶ್ರೀಕೃಷ್ಣ ಪರಮಾತ್ಮ ಹಲವು ಅವತಾರವನ್ನು ಪ್ರದರ್ಶಿಸಿದ್ದಾನೆ. ಇಡಿ ವಿಶ್ವವೇ ಶ್ರೀಕೃಷ್ಣನನ್ನು ಪೂಜಿಸುತ್ತದೆ. ಸುದರ್ಶನ ಚಕ್ರದ ರೀತಿಯ ಕ್ಷಿಪಣಿಯನ್ನು ಭಾರತ ಕಂಡು ಹಿಡಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ’ ಎಂದು ನೆನಪಿಸಿದರು.

ಮಾಜಿ ಶಾಸಕ ಎ.ವಿ.ಉಮಾಪತಿ, ತಹಶೀಲ್ದಾರ್ ಕೊರಲಗುಂದಿ ವಿಜಯಕುಮಾರ್, ತಾ.ಪಂ. ಇಒ ವಿಶ್ವನಾಥ, ಸುಮಿತ್ರಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಶಪ್ಪ, ಗೌರವಾಧ್ಯಕ್ಷ ಲೋಕೇಶ್, ವಿಶ್ವನಾಥಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಂಗಾರಪ್ಪ, ಗುಂಜಿಗನೂರು ಗ್ರಾ.ಪಂ. ಅಧ್ಯಕ್ಷ ಉಮೇಶ್, ಬಿದರಕೆರೆ ಗ್ರಾ.ಪಂ. ಅಧ್ಯಕ್ಷ ದಾನವೇಂದ್ರ, ಬಸವರಾಜ್ ಯಾದವ್, ಎ.ಚಿತ್ತಪ್ಪ, ಎ.ಜಯಪ್ಪ, ಬಿ.ಸಿಎಂ ಕಲ್ಯಾಣಾಧಿಕಾರಿ ಪ್ರದೀಪ್, ಶಿವಕುಮಾರ್, ಪಿ.ತಿಮ್ಮಪ್ಪ, ಚನ್ನಕೇಶವ, ಯಾದವ ಸಮಾಜದ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.