ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪರಿಶಿಷ್ಟ ಜಾತಿ ಪಟ್ಟಿಗೆ ಮಡಿವಾಳರ ಒತ್ತಾಯ

ಮುಖ್ಯಮಂತ್ರಿ ಬಳಿಗೆ ನಿಯೋಗ: ‘ಕಾಯಕ ಜನೋತ್ಸವ’ದಲ್ಲಿ ತೀರ್ಮಾನ
Last Updated 6 ಜನವರಿ 2021, 12:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಬಸವ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿಗೆ ನಿಯೋಗ ತೆರಳಲು ‘ಕಾಯಕ ಜನೋತ್ಸವ’ದಲ್ಲಿ ತೀರ್ಮಾನಿಸಲಾಯಿತು.

ಬಸವ ಮಾಚಿದೇವ ಸ್ವಾಮೀಜಿ ಅವರ ಮೂರನೇ ಪಟ್ಟಾಧಿಕಾರ ಮಹೋತ್ಸವ, 37ನೇ ಜನ್ಮದಿನ ಹಾಗೂ 22ನೇ ಜಂಗಮದೀಕ್ಷೆಯ ಅಂಗವಾಗಿ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಬುಧವಾರ ನಡೆದ ಕಾಯಕ ಜನೋತ್ಸವದಲ್ಲಿ ಸಮುದಾಯದ ಮುಖಂಡರು ಮೀಸಲಾತಿಯ ಬೇಡಿಕೆಯನ್ನು ಮುನ್ನೆಲೆ ತಂದು ಚರ್ಚಿಸಿದರು.

‘ಹೆದರಿಸಿ, ಬೆದರಿಸಿ ಸೌಲಭ್ಯ ಪಡೆಯುವ ಸಮುದಾಯ ನಮ್ಮದಲ್ಲ. ಊರಿಗೆ ಒಂದೊ, ಎರಡೊ ಮಡಿವಾಳರ ಮನೆಗಳಿವೆ. ಸ್ಪರ್ಧೆ, ಪೈಪೋಟಿ ಮಾಡಲು ಸಾಧ್ಯವಿಲ್ಲ ಎಂಬುದೂ ಗೊತ್ತಿದೆ. ಮಡಿವಾಳ ಸಮುದಾಯದ ಸ್ಥಿತಿ ನೋಡಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ. ನಿಮ್ಮೊಂದಿಗೆ (ಮುಖ್ಯಮಂತ್ರಿ) ನಾವು ಇರುತ್ತೇವೆ’ ಎಂದು ಬಸವ ಮಾಚಿದೇವ ಸ್ವಾಮೀಜಿ ಮನವಿ ಮಾಡಿದರು.

‘12 ವರ್ಷಗಳ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಆಶ್ವಾಸನೆ ನೀಡಿದ್ದರು. ಕುಲಶಾಸ್ತ್ರೀಯ ಅಧ್ಯಯನ ನಡೆದು ಶಿಫಾರಸು ಸಿದ್ಧವಾಗಿದೆ. ಸಚಿವ ಸಂಪುಟದ ಒಪ್ಪಿಗೆಗೆ ಕಾಯುವ ಅಗತ್ಯವಿಲ್ಲ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಮೀಸಲಾತಿಯ ಅಗತ್ಯವಿದೆ. ಮಡಿವಾಳರ ಬಗ್ಗೆ ಕರುಣೆ, ಅನುಕಂಪ ಇದ್ದರೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT