‘ಘಟನೆ ಸಂಬಂಧ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಸದಸ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಎನ್.ರವಿಕುಮಾರ್ ಘಾಟ್, ಮಸ್ಕಲ್ ಮಟ್ಟಿ ಓಂಕಾರ್, ಕರ್ಣಕುಮಾರ್, ಬೇವಿನಹಳ್ಳಪ್ಪ, ರಾಘವೇಂದ್ರ, ವಿಷ್ಣು, ನಾಗರಾಜ್, ಗನ್ನಾಯಕನಹಳ್ಳಿ ರಾಜಣ್ಣ ಅವರು ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.