ಹಿರಿಯೂರು: ತನ್ನ ಆರೈಕೆ ಮಾಡುತ್ತಿದ್ದ ಮಗಳು ಹಠಾತ್ ಸಾವನ್ನಪ್ಪಿದ ನೋವನ್ನು ತಾಳಲಾರದೆ ತಂದೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೊಡ್ಡಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಹಿರಿಯ ರೈತ ಹೋರಾಟಗಾರ ಟಿ. ಷಣ್ಮುಗಂ (86) ಮೃತಪಟ್ಟವರು.
ತಮ್ಮ ಮೂವರು ಹೆಣ್ಣುಮಕ್ಕಳ ಪೈಕಿ ಒಬ್ಬರಾದ ಪದ್ಮ ಅವರು ಶುಕ್ರವಾರ ತೀರಿಕೊಂಡಿದ್ದರು. ಶನಿವಾರ ಅಂತ್ಯಕ್ರಿಯೆ ನೆರವೇರಿಸಿದ ನಂತರ ಷಣ್ಮುಗಂ ತೀವ್ರ ದುಃಖಿತರಾಗಿದ್ದರು. ಸಾವಿನ ನೋವಿನಿಂದ ಹೊರಬರಲಾದೇ ಅವರು ರಾತ್ರಿ ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು.