ಹಿರಿಯೂರು: ತಾಲ್ಲೂಕಿನ ಮಾಯಸಂದ್ರ ಗ್ರಾಮದ ಕರಿಯಮ್ಮ ದೇವಿಯ ಜಾತ್ರೆ, ಶಿಖರ ಪ್ರತಿಷ್ಠಾಪನೆ, ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಮತ್ತು ಮಾತಂಗಮ್ಮ ದೇವಿಯ ಶಿಖರ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಮೇ 3 ರಿಂದ 16 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮೇ 3 ರಂದು ಹೋಮ, ನವಗ್ರಹ ಪೂಜೆ, 4 ರಂದು ನಾಗದೇವರಿಗೆ ಆಶ್ಲೇಷಾ ಬಲಿ ಪೂಜೆ, 5 ರಿಂದ 8 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 9 ರಂದು ಮೊದಲಿಂಗಿತ್ತಿ ಶಾಸ್ತ್ರ, ಕಂಕಣ ಕಟ್ಟುವುದು, 10 ರಂದು ಜಲ್ದಿ ಪೂಜೆ, ದೇವಿಯ ಮೆರವಣಿಗೆ ನಂತರ ದೊಡ್ಡಪೂಜೆ, 11 ರಂದು ಆರತಿ ಬಾನ ಮತ್ತು ಗ್ರಾಮಸ್ಥರಿಂದ ಬೇವಿನ ಹುಡಿಕೆ ಪೂಜೆ, 12 ರಂದು ಕರಿಯಮ್ಮ ದೇವಿಯ ಸಿಡಿ ಉತ್ಸವ, 13 ರಂದು ಭಕ್ತರಿಂದ ಆರತಿ ಮತ್ತು ಮುಡಿ ತೆಗೆಯುವ ಕಾರ್ಯಕ್ರಮ, 14 ರಂದು ಬೆಳಿಗ್ಗೆ 4 ಗಂಟೆಗೆ 101 ಎಡೆ ಪೂಜೆ, 7 ಗಂಟೆಗೆ ಗಾವು, 8.30 ರಿಂದ ಗ್ರಾಮ ಪ್ರವೇಶ ಕಾರ್ಯಕ್ರಮ, 15 ರಂದು ವಿವಿಧ ಪೂಜಾ ಕಾರ್ಯಕ್ರಮ, 16 ರಂದು ಕರಿಯಮ್ಮ ದೇವಿಯ ದೊಡ್ಡ ಪೂಜೆ, ಚಪ್ಪರ ಇಳಿಸುವುದು ಮತ್ತು ಕಂಕಣ ಬಿಚ್ಚುವ ಕಾರ್ಯಕ್ರಮ ನಡೆಯಲಿದೆ.

ಜಾತ್ರೆ ಮುಗಿಯುವವರೆಗೆ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.