ಚಿತ್ರದುರ್ಗ: ‘ವೃತ್ತಿ ಹಾಗೂ ವ್ಯಕ್ತಿ ಗೌರವಕ್ಕೆ ಬಸವಣ್ಣನವರು ಅಪಾರ ಪ್ರಾಧಾನ್ಯತೆ ಕೊಟ್ಟಿದ್ದರು. ಕೌಶಲ ಕೆಲಸಗಳಿಗೆ ಹೆಸರುವಾಸಿಯಾಗಿದ್ದ ಮೇದಾರ ಕೇತಯ್ಯನವರು ವೃತ್ತಿ– ವ್ಯಕ್ತಿಗೆ ಗೌರವ ತಂದುಕೊಟ್ಟಿದ್ದರು. ಅವರು ಬಿದಿರು ಬಳಸಿ ಹಲವು ವಸ್ತುಗಳನ್ನು ತಯಾರಿಸುತ್ತಿದ್ದರು. ವೃತ್ತಿ ಹಾಗೂ ವ್ಯಕ್ತಿಯ ನಡುವೆ ಅವಿನಾಭಾವ ಕಲ್ಪಿಸಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.

ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿ ಸನ್ನಿಧಾನದಲ್ಲಿ ಶನಿವಾರ ನಡೆದ ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಗೆ ಎಷ್ಟು ಗೌರವ ಇತ್ತೋ ವೃತ್ತಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದ ಕಾರಣ ಅಲ್ಲಿ ಯಾವುದೇ ವೃತ್ತಿಯನ್ನು ಅಗೌರವದಿಂದ ಕಾಣುವ ಪರಿಸ್ಥಿತಿ ಇರಲಿಲ್ಲ. ನೂರಾರು ಕಸಬು ಮಾಡುವವರು ಅಲ್ಲಿ ಸಮಾನವಾಗಿ ನೆಲೆ ನಿಂತಿದ್ದರು. ಎಲ್ಲರಿಗೂ ಗೌರವ ನೀಡುತ್ತಿದ್ದ ಬಸವಣ್ಣನವರು ವೃತ್ತಿ ಗೌರವ ತಂದುಕೊಟ್ಟಿದ್ದರು. ವಚನ ಸಾಹಿತ್ಯಕ್ಕೆ ಮೇದಾರ ಕೇತಯ್ಯ ಅವರೂ ಕೊಡುಗೆ ನೀಡಿದ್ದಾರೆ’ ಎಂದರು.

‘ವಚನ ಸಾಹಿತ್ಯ ದೇಶದ 24 ಭಾಷೆಗಳಿಗೆ ತರ್ಜುಮೆಗೊಂಡಿದೆ. ಅದು ಪ್ರಪಂಚದ ಇತರೆ ಭಾಷೆಗಳಿಗೂ ಭಾಷಾಂತರಗೊಂಡಾಗ ಬಸವಣ್ಣ ಮತ್ತಿತರ ಶರಣರ ವ್ಯಕ್ತಿತ್ವವು ಈ ನಾಡಿಗೆ ತಿಳಿಯುತ್ತದೆ. ಪ್ರಪಂಚದ ಬೇರೆ ಬೇರೆ ದಾರ್ಶನಿಕರು ತಮ್ಮ ತತ್ವ ಸಿದ್ಧಾಂತಗಳ ಮೂಲಕ ಪರಿಚಯವಾದರು. ಆದರೆ ಬಸವಾದಿ ಶರಣರ ವಿಚಾರಗಳು ಅಷ್ಟಾಗಿ ಪ್ರಚಾರ ಪಡೆಯದೆ ಬೆಳಕಿಗೆ ಬರಲಿಲ್ಲ. ಈಗೀಗ ಎಲ್ಲಾ ಕಡೆ ಶರಣರ ವಿಚಾರಗಳು ಪಸರಿಸುತ್ತಿವೆ’ ಎಂದರು.

‘12ನೇ ಶತಮಾನದ ಮೇದಾರ ಕೇತಯ್ಯನವರು ಬಿದಿರಿನ ಕಲಾಕೃತಿಗಳ ಮೂಲಕ ಹೆಸರುವಾಸಿಯಾಗಿದ್ದು. ಕಲಾ ನೈಪುಣ್ಯತೆಯಿಂದ ಆಕರ್ಷಕ ಮಾದರಿಯ ಕಲಾಕೃತಿಗಳನ್ನು ಹೆಣೆಯುತ್ತಿದ್ದರು. ಮೇದಾರ ಸಮುದಾಯ ಮಾಡಿದ ತೊಟ್ಟಿಲು ಹುಟ್ಟುವಾಗ ಬೇಕು. ನಂತರ ಸತ್ತಾಗ ಚಟ್ಟ ಕಟ್ಟಲು ಇವರ ನೆರವು ಅಗತ್ಯ. ಇಂತಹ ಕೆಲಸ ಮಾಡುತ್ತಲೇ ಕಾಯಕ, ದಾಸೋಹ, ಜಂಗಮಪ್ರೇಮಿಯಾಗಿ ಮೇದಾರ ಕೇತಯ್ಯ ಜೀವನ ನಡೆಸಿದರು’ ಎಂದರು.

‘ಹಿಂದಿನ ಕಾಲದಲ್ಲಿ ವೃತ್ತಿಗಳಾಗಿದ್ದ ಸಂಸ್ಕೃತಿಗಳು ಇಂದು ಜಾತಿಯಾಗಿ ರೂಪಗೊಂಡಿವೆ. ವೃತ್ತಿಯಿಂದಲೇ ಗುರುತಿಸಿಕೊಳ್ಳುತ್ತಿದ್ದವರು ಈಗ ಜಾತಿಯಿಂದ ಗುರುತಿಸುತ್ತಿರುವುದು ದುರದೃಷ್ಟಕರ. ವೃತ್ತಿಪರತೆಗಿಂತ ಜಾತಿಪ್ರೇಮವೇ ಅತಿಯಾಗಿದೆ. ಇದಕ್ಕೆ ಅಂತ್ಯವಾಡುವ ಅನಿವಾರ್ಯತೆ ಇದೆ’ ಎಂದರು.

ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ ‘ಶರಣರು ತಾವು ಮಾಡುವ ವೃತ್ತಿಯಲ್ಲಿ ಯಾವುದೇ ತಾರತಮ್ಯ ಎಣಿಸದೆ ಅದಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದರು. ತಾವು ಮಾಡುವ ಕೆಲಸವನ್ನು ತುಂಬಾ ಭಾವಪರವಶತೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು. ಇವರು ಮಾಡುವ ಕಾಯಕಕ್ಕೆ ಎಲ್ಲಿಲ್ಲದ ಗೌರವವೂ ಇದ್ದ ಕಾರಣ ಎಂತಹುದೇ ಕೆಲಸ ಮಾಡಲು ಹಿಂಜರಿಯುತ್ತಿರಲಿಲ್ಲ. ಮೇದಾರ ಕೇತಯ್ಯನವರು ತಮ್ಮ ಬಿದಿರು ಕಾಯಕದಿಂದ ಕಲ್ಯಾಣದಲ್ಲಿ ಹೆಸರು ಪಡೆದಿದ್ದರು’ ಎಂದರು.

‘ಒಂದು ಬಿದಿರು ಬುಟ್ಟಿ ಹೆಣೆಯಲು ಬಹಳ ಸಮಯ ಬೇಕು. ಅದನ್ನು ಅವರು ನಿಷ್ಠೆಯಿಂದ ಮಾಡುತ್ತಿದ್ದರು. ಅವರಿಗೆ ಒಮ್ಮೆ ಬಿದಿರು ಕಡಿಯುತ್ತಿರುವಾಗ ಮುತ್ತುರತ್ನಗಳು ದೊರೆಯುತ್ತವೆಂಬ ಪ್ರತೀತಿ. ಅದನ್ನವರು ತಮ್ಮ ಸ್ವಂತಕ್ಕೆ ಬಳಸದೆ ಇದು ನನಗೆ ಬೇಡ ಎಂದು ತಿಪ್ಪೆಗೆ ಎಸೆಯುತ್ತಾರೆಂಬ ಮಾತುಗಳಿವೆ. ಕೇವಲ ಸತ್ಯಶುದ್ಧ ಕಾಯಕ ಮಾಡುತ್ತಿದ್ದ ಇವರು ಅದರಿಂದ ತೃಪ್ತಿಪಡುತ್ತಿದ್ದರು’ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಾಗರಾಜ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಆಶಾರಾಣಿ, ಬಸವನಗೌಡ ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ ಅವರು ಮೇದಾರ ಕೇತಯ್ಯನವರ ವಚನದ ಗಾಯನ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.