ಮೊಳಕಾಲ್ಮುರಿಗೆ 371 (ಜೆ) ಅಗತ್ಯವಿದೆ: ಸಚಿವ ಶ್ರೀರಾಮುಲು

ಚಿತ್ರದುರ್ಗ: ಸಂವಿಧಾನದ 371 (ಜೆ) ಕಾಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕಲ್ಪಿಸಿದ ವಿಶೇಷ ಸ್ಥಾನ ಅತ್ಯಂತ ಹಿಂದುಳಿದ ಮೊಳಕಾಲ್ಮುರು ತಾಲ್ಲೂಕಿಗೂ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊಳಕಾಲ್ಮುರು ತಾಲ್ಲೂಕಿಗೆ ವಿಶೇಷ ಸ್ಥಾನ ಲಭ್ಯವಾದರೆ ಇನ್ನಷ್ಟು ಅನುದಾನ ಹರಿದುಬರುತ್ತದೆ. ಹಿಂದುಳಿದ ತಾಲ್ಲೂಕಿನ ಜನರ ಏಳಿಗೆಗೆ ಇದು ನೆರವಾಗಲಿದೆ. ಆದರೆ, ಮೊಳಕಾಲ್ಮುರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ವಿಚಾರದಲ್ಲಿ ಹೋರಾಟಗಾರರು ಹಾಗೂ ಜನರ ಅಭಿಪ್ರಾಯವೇ ಅಂತಿಮ’ ಎಂದು ಹೇಳಿದರು.
‘ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಅಖಂಡವಾಗಿದ್ದ ಜಿಲ್ಲೆಯಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಿದ್ದವು. ಈಗ ಜಿಲ್ಲೆಯ ವ್ಯಾಪ್ತಿ ಕಿರಿದಾಗಿದೆ. ಮೊಳಕಾಲ್ಮುರು ತಾಲ್ಲೂಕು ಸೇರ್ಪಡೆ ವಿಚಾರ ಮುನ್ನೆಲೆಗೆ ಬಂದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.