ನಾಯಕನಹಟ್ಟಿ: ರಾತ್ರಿ-ಹಗಲೆನ್ನದೆ ನಿರಂತರವಾಗಿ ರೋಗಿಗಳಿಗೆ ಔಷಧಿ ವಿತರಿಸುವ ಫಾರ್ಮಾಸಿಸ್ಟ್ಗಳ ಸೇವೆ ಅನನ್ಯವಾದದ್ದು ಎಂದು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಅಫ್ರೋಜ್ಬಾಷಾ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣದ ಔಷಧಿ ಮಳಿಗೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ವೇಳೆ ಮಾತನಾಡಿದರು.

ವೈದ್ಯರಷ್ಟೇ ಮುಖ್ಯ ಪಾತ್ರವನ್ನು ಔಷಧಿತಜ್ಞರು ನಿರ್ವಹಿಸುತ್ತಿದ್ದಾರೆ. ಔಷಧ ಸಂಶೋಧನೆ, ತಯಾರಿಕೆ, ವಿತರಣೆ ಸೇರಿ ಎಲ್ಲ ಹಂತಗಳಲ್ಲೂ ಔಷಧಿ ತಜ್ಞರು ಶ್ರಮಿಸುತ್ತಿದ್ದಾರೆ ಎಂದರು.

2009ರಲ್ಲಿ ಅಂತರರಾಷ್ಟ್ರೀಯ ಫಾರ್ಮಾಸುಟಿಕಲ್ ಫೆಡರೇಷನ್ನ ಸೂಚನೆಯಂತೆ ಪ್ರತಿ ಸೆ.25ರಂದು ವಿಶ್ವ ಫಾರ್ಮಾಸಿಸ್ಟ್ ದಿನ ಆಚರಿಸಲಾಗುತ್ತಿದೆ ಫಾರ್ಮಾಸಿಸ್ಟ್ ವಾಸೀಂ ಅಹಮ್ಮದ್ ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ.ಸಚಿನ್, ಡಾ.ಅಶೋಕ್, ಡಾ.ಸುರೇಶ್, ಔಷಧಿ ಮಳಿಗೆ ಒಕ್ಕೂಟದ ನಾಗರಾಜ್, ಬಿ.ಟಿ.ರವಿಕುಮಾರ್, ಜೆ.ಪಿ.ತಿಪ್ಪೇಸ್ವಾಮಿ, ವೀರೇಶ್, ಲಕ್ಷ್ಮಣ್ ಸಿಬ್ಬಂದಿ ಸುಧಾ, ದೇವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.