ಹಿರಿಯೂರು: ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೆಂಗು, ಅಡಿಕೆ ತೋಟದ ರೈತರು ಸಂತಸಗೊಂಡಿದ್ದರೆ, 15–20 ದಿನದಲ್ಲಿ ಕೊಯ್ಲು ಮಾಡಬೇಕಿದ್ದ ಈರುಳ್ಳಿ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ.

ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಹರ್ತಿಕೋಟೆ ಗ್ರಾಮದ ಎಲ್. ರಂಗನಾಥ್ ಅವರ 2 ಎಕರೆ, ರಾಜಣ್ಣ ಅವರ 1.03 ಎಕರೆ, ಜಿ. ಶ್ರೀನಿವಾಸ್ ಅವರ 1 ಎಕರೆ, ತಾಳವಟ್ಟಿ ಗ್ರಾಮದ ಲಕ್ಷ್ಮೀದೇವಿಯವರ 5 ಎಕರೆ ಈರುಳ್ಳಿ ಬೆಳೆ ಮಳೆ ನೀರಿನಲ್ಲಿ ಮುಳುಗಿದ್ದು, ಈರುಳ್ಳಿ ಗೆಡ್ಡೆಗಳು ಕೊಳೆಯುವ ಆತಂಕ ಎದುರಾಗಿದೆ.

ಈಶ್ವರಗೆರೆ 22.4 ಮಿ.ಮೀ: ಮಂಗಳವಾರ ರಾತ್ರಿ ತಾಲ್ಲೂಕಿನ ಈಶ್ವರಗೆರೆ ಗ್ರಾಮದಲ್ಲಿ 22.4 ಮಿ.ಮೀ, ಸೂಗೂರಿನಲ್ಲಿ 19.1, ಬಬ್ಬೂರಿನಲ್ಲಿ 17.8, ಹಿರಿಯೂರಿನಲ್ಲಿ 14.2 ಹಾಗೂ ಇಕ್ಕನೂರಿನಲ್ಲಿ 9.6 ಮಿ.ಮೀ. ಮಳೆಯಾಗಿದೆ.

ಮಧ್ಯಾಹ್ನದಿಂದಲೇ ವರುಣ ಅಬ್ಬರ: ಬುಧವಾರ ಮಧ್ಯಾಹ್ನ 3 ಗಂಟೆಯಿಂದಲೇ ಬಿರುಸಿನ ಮಳೆ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.