ಚಿತ್ರದುರ್ಗ: ಕಳೆದೊಂದು ತಿಂಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಸೋನೆ ಸುರಿದ ಪರಿಣಾಮ ಗ್ರಾಮೀಣ ಭಾಗದ ರಸ್ತೆಗಳ ಗುಣಮಟ್ಟ ಬಯಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ.

ಜಿಲ್ಲಾ ಕೇಂದ್ರ, ನಗರದಲ್ಲೂ ಹಲವು ರಸ್ತೆಗಳು ಕಿತ್ತುಹೋಗಿದ್ದು ಕಳಪೆ ಕಾಮಗಾರಿಯ ದರ್ಶನವಾಗಿದೆ. ಪ್ರತಿ ರಸ್ತೆ ನಿರ್ಮಾಣ ಮಾಡುವಾಗಲೂ ಅದಕ್ಕೆ ತನ್ನದೇ ಆದ ಮಾನದಂಡವಿರುತ್ತದೆ. ರಸ್ತೆಗಳಿಗೆ ಎಷ್ಟು ಇಂಚು ಡಾಂಬರ್, ಸಿಮೆಂಟ್ ಹಾಕಬೇಕು ಎಂಬ ನಿಯಮಾವಳಿ ಇದೆ. ಆದರೆ ಗುತ್ತಿಗೆದಾರರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಳಪೆ ಕಾಮಗಾರಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಮಾಡದ ಕಾರಣ ರಸ್ತೆಗಳು ಮಳೆಗೆ ಕಿತ್ತು ಹೋಗಿ ರಸ್ತೆಗಳೇ ಗುಂಡಿಗಳಾಗಿವೆ.

ಭೀಮಸಮುದ್ರ – ಕಡ್ಲೇಗುದ್ದು, ಕೋಣನೂರು – ಚಿಕ್ಕೇನಹಳ್ಳಿ ಮೂಲಕ ಸಿರಿಗೆರೆ ತಲುಪಲು ವಾಹನ ಸವಾರರಿಗೆ ಎಂಟೆದೆ ಇರಬೇಕು. ಕಣ್ಣುಗಳನ್ನು ಅತ್ತಿತ್ತ ಹಾಯಿಸಿದರೂ ಯಾವುದೇ ಕ್ಷಣದಲ್ಲಿಯೂ ನೀವು ಗುಂಡಿಗಳಿಗೆ ಬಿದ್ದು ಗಾಯಗೊಳ್ಳಬೇಕಾದ ಸ್ಥಿತಿ ಇದೆ. ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು ಹೊಸದಾಗಿ ಬರುವವರಿಗೆ ವಾಹನ ಚಾಲನೆ ಮಾಡುವುದು ಸವಾಲಾಗಿದೆ.

ಕಳೆದ ವರ್ಷವಷ್ಟೇ ನಿರ್ಮಾಣವಾದ ನೀಲಯ್ಯನಹಟ್ಟಿ – ದೊಡ್ಡಾಲಗಟ್ಟ – ಸಿರಿಗೆರೆ ರಸ್ತೆ ಈಗಾಗಲೇ ಎರಡು ಬಾರಿ ಅನುದಾನ ನುಂಗಿ ಹಾಕಿದೆ. ಕಾಮಗಾರಿ ತೀರಾ ಕಳಪೆಯಾಗಿದ್ದು ಸ್ಥಳೀಯರನ್ನು ಹೈರಾಣಾಗಿಸಿದೆ.

ಹಿರಿಯೂರು ತಾಲ್ಲೂಕಿನ ಹೇಮದಳ, ಅಂಬಲಗೆರೆ, ಶಿಡ್ಲಯ್ಯನ ಕೋಟೆ ಮಾರ್ಗವಾಗಿ ಧರ್ಮಪುರ ಕಡೆ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟು ಕೊಳಚೆ ಗುಂಡಿಯಂತಾಗಿದೆ. ರಸ್ತೆಗೆ ಹಾಕಿದ ಡಾಂಬರ್ ಕಾಣದಂತಾಗಿ ಮಣ್ಣಿನ ರಸ್ತೆಯಂತೆ ಗೋಚರಿಸುತ್ತಿದೆ. ನಾಲ್ಕೈದು ವರ್ಷಗಳಿಂದ ರಸ್ತೆಯನ್ನು ಸರಿಪಡಿಸಿ ಎಂದು ಒತ್ತಾಯಿಸುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ.

‘ರಾತ್ರಿ ವೇಳೆ ದೊಡ್ಡ ದೊಡ್ಡ ಟಿಪ್ಪರ್ಗಳಲ್ಲಿ ಮಣ್ಣು ಹಾಗೂ ಮರಳನ್ನು ಸಾಗಿಸುವುದರಿಂದ ರಸ್ತೆ ಹಾಳಾಗಿದೆ. ಅಕ್ರಮ ಮರಳು ಸಾಗಣೆ, ಅಕ್ರಮ ಮಣ್ಣು ಸಾಗಣೆಯನ್ನು ತಡೆಯುವಂತೆ ತಾಲೂಕು ಕಚೇರಿ ಪೊಲೀಸ್ ಠಾಣೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ’ ಎಂಬುದು ಜನರ ದೂರು.

ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮೀಣ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ಸಂಚಾಕಾರ ಉಂಟಾಗಿದೆ. ಬೇಸಿಗೆಯಲ್ಲಿ ರೈತರ ತೋಟಗಳಿಗೆ ಕೆರೆ ಮಣ್ಣನ್ನು ಹೇರುತ್ತಿರುವುದು ಮತ್ತು ರೈತರು ಕೊಳವೆ ಬಾವಿಗಳ ನೀರನ್ನು ರಸ್ತೆಯ ಮತ್ತೊಂದು ಬದಿಯಲ್ಲಿರುವ ತೋಟಗಳಿಗೆ ನೀರನ್ನು ಒಯ್ಯಲು ಗುಂಡಿಗಳನ್ನು ತೋಡಿ, ಪೈಪ್ಗಳನ್ನು ಹಾಕಿಕೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಇದರ ಜತೆ ಅಧಿಕ ಮಳೆಯಿಂದಾಗಿ ರಸ್ತೆಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಈ ಹಿಂದೆ ರಸ್ತೆಗಳಿಗೆ ಹಾಕಲಾಗಿದ್ದ ಡಾಂಬರ್ ಕಿತ್ತು ಹೋಗಿ ರಸ್ತೆಗಳು ಗುಂಡಿಗಳ ಕಾರ್ಯಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಈ ರಸ್ತೆಗಳಲ್ಲಿ ಪಾದಚಾರಿಗಳು, ಜಾನುವಾರುಗಳು, ಶಾಲಾ ಬಸ್ಗಳಾಗಲಿ, ದ್ವಿಚಕ್ರ ವಾಹನಗಳಾಗಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರ, ನಾಗಸಮುದ್ರ, ಹಾನಗಲ್, ಬಿ.ಜಿ.ಕೆರೆ, ಕೋನಸಾಗರ, ಕೊಂಡ್ಲಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಿಕ್ಕಾಪಟ್ಟೆ ಗುಂಡಿಗಳು ಬಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಮಳೆ ಬಂದರಂತೂ ನೀರು ನಿಂತು ದಾರಿಹೋಕರ ಮೂಗು ಮುಚ್ಚಿಸುತ್ತಿವೆ.

15 ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮಗಳಲ್ಲಿನ ರಸ್ತೆ, ಚರಂಡಿ ನಿರ್ಮಾಣಕ್ಕೆ ಅವಕಾಶವಿದ್ದ ಪರಿಣಾಮ ಸಾಕಷ್ಟು ಸಿ.ಸಿ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಈಗ ಯೋಜನೆಯಲ್ಲಿ ರಸ್ತೆ ಕಾರ್ಯ ಮಾಡುವಂತಿಲ್ಲದ ಪರಿಣಾಮ ರಸ್ತೆಗಳ ತುಂಬಾ ಗುಂಡಿ ಬಿದ್ದು ಜಲ್ಲಿಕಲ್ಲುಗಳು ಹೊರ ಬರುತ್ತಿವೆ. ರಸ್ತೆಗಳ ದುರಸ್ತಿಗೂ ಅವಕಾಶ ಇಲ್ಲದಂತಾಗಿದೆ.

ಜಿಲ್ಲೆಯ ವಿವಿಧೆಡೆ ಗ್ರಾಮೀಣ ರಸ್ತೆಗಳು ಹಾಳಾಗಿರುವ ಬಗ್ಗೆ ಜನರು ದೂರಿದ್ದಾರೆ. ಈ ಕುರಿತು ಅಧಿಕಾರಿಗಳ ಸಭೆ ನಡೆಸಿ ಅತಿ ಶೀಘ್ರದಲ್ಲಿ ರಸ್ತೆಗಳ ದುರಸ್ತಿ ಮಾಡುವಂತೆ ಸೂಚಿಸಲಾಗುವುದು
ಟಿ.ವೆಂಕಟೇಶ್ ಜಿಲ್ಲಾಧಿಕಾರಿ

ರಸ್ತೆಯೇ ಕೆರೆಯಾಯ್ತು...

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ- ಹೊರಕೆರೆದೇವರಪುರ ಮಧ್ಯದ ರಸ್ತೆ ಹಾಳಾಗಿದ್ದು ರಸ್ತೆಯಲ್ಲಿ ನೀರು ನಿಂತಿದ್ದು ಸ್ಥಳೀಯರು ಪರದಾಡುತ್ತಿದ್ದಾರೆ. ಈ ರಸ್ತೆ ಚಿತ್ರಹಳ್ಳಿ ಗೇಟ್ ನಿಂದ ಈಚಘಟ್ಟ ನಗರಘಟ್ಟ ನೆಲ್ಲಿಕಟ್ಟೆ ಮತಿಘಟ್ಟ ಪಂಪಾಪುರ ಹೊರಕೆರೆ ದೇವರಪುರ ನಂದನ ಹೊಸೂರು ಉಪ್ಪರಿಗೇನಹಳ್ಳಿ ತೇಕಲವಟ್ಟಿ ಕೆರೆಯಾಗಳ ಹಳ್ಳಿ ಕೊಳಾಳು ಮೂಲಕ ಹಿರಿಯೂರು ತಾಲ್ಲೂಕಿಗೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆ ಉಪ್ಪರಿಗೇನಹಳ್ಳಿ ಸಮೀಪದಿಂದ ಕಿಟ್ಟದಹಳ್ಳಿ ಕೆಂಕೆರೆ ಮಾಡದಕೆರೆ ಮೂಲಕ ಹೊಸದುರ್ಗಕ್ಕೂ ಸಂಪರ್ಕ ಕಲ್ಪಿಸುತ್ತದೆ. ಆದರೆ ಚಿತ್ರಹಳ್ಳಿ ಗೇಟ್ನಲ್ಲೇ ರಸ್ತೆ ಹಾಳಾಗಿದ್ದು ದೊಡ್ಡ ಗುಂಡಿಗಳು ಬಿದ್ದಿವೆ. ಗುಂಡಿಯಲ್ಲಿ ಮಳೆ ನೀರು ಕೆಸರು ತುಂಬಿರುವುದರಿಂದ ಸಂಚಾರ ಕಷ್ಟವಾಗಿದೆ. ಮುಂದೆ ಈಚಘಟ್ಟ ಗೇಟ್ನಲ್ಲೂ ರಸ್ತೆ ಮೇಲೆಯೇ ನೀರು ನಿಂತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯ ಮೇಲೆಯೇ ಹಳ್ಳದ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತಾಲ್ಲೂಕಿನ ಎನ್.ಜಿ.ಹಳ್ಳಿ-ರಾಮಗಿರಿ ರಸ್ತೆಯೂ ಹದಗೆಟ್ಟಿದ್ದು ಗುಂಡಿಗಳು ಬಿದ್ದಿವೆ. ಗೌಡಿಹಳ್ಳಿ ಸಮೀಪ ರಸ್ತೆ ಕಿತ್ತು ಹೋಗಿದ್ದು ಮಳೆಗಾಲದಲ್ಲಿ ಸಂಚಾರ ಕಷ್ಟವಾಗಿದೆ. ಡಾಂಬರು ಹಾಕದ ಕೆಲವು ಗ್ರಾಮೀಣ ರಸ್ತೆಗಳಗಳ ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು ಸುಗಮ ಸಂಚಾರಕ್ಕೆ ಅಡಚಣೆ ಆಗಿದೆ.

ರಸ್ತೆ ತುಂಬಾ ಕೊರಕಲು

ಚಳ್ಳಕೆರೆ ತಾಲ್ಲೂಕಿನಾದ್ಯಂತ 3- 4 ದಿನ ಮಳೆ ಸುರಿದ ಪರಿಣಾಮ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಕೆಲ ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿ ನಿರ್ಮಾಣಗೊಂಡಿದ್ದು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿವೆ. ಇದರಿಂದಾಗಿ ದ್ವಿಚಕ್ರ ವಾಹನ ಹಾಗೂ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ರಭಸವಾಗಿ ಹರಿಯುತ್ತಿರುವ ಹಳ್ಳದ ನೀರಿಗೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಸಮೀಪ ಉಪ್ಪಳ್ಳದ ಬಳಿ ಪಾವಗಡ ರಸ್ತೆ ಮಾರ್ಗದ ರಸ್ತೆಗೆ ಹಾಕಿದ ಡಾಂಬರು ಕಿತ್ತು ಹೋಗಿದೆ. ನಗರಂಗೆರೆ ಗ್ರಾಮದ ಕೆರೆ ಕೋಡಿಯಿಂದ ಹರಿದ ನೀರು ದೊಡ್ಡೇರಿ ಚಿಕ್ಕ ಕೆರೆಗೆ ಸೇರುತ್ತಿದೆ.ಈಗ ಚಿಕ್ಕ ಕೆರೆ ಕೋಡಿ ಬಿದ್ದು ಹೆಚ್ಚಿನ ಪ್ರಮಾಣದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಡಾಂಬರು ರಸ್ತೆಯಲ್ಲಿ ಕೊರಕಲು ಉಂಟಾಗಿದೆ. ನೆಹರೂ ವೃತ್ತದ ಬಳಿ ಚಿತ್ರದುರ್ಗ ಮಾರ್ಗದ ರಸ್ತೆ ಬಲಭಾಗದ ತಗ್ಗು ಗುಂಡಿಯಲ್ಲಿ ಮಳೆ ನೀರು ನಿಂತಿರುವುದರಿಂದ ಆ ಭಾಗದ ರಸ್ತೆಯಲ್ಲಿ ಓಡಾಡಲು ಜನರು ಪಡಬಾರದ ಕಷ್ಟಪಡುತ್ತಿದ್ದಾರೆ.

ಪೂರಕ ಮಾಹಿತಿ: ಸುವರ್ಣಾ ಬಸವರಾಜ್, ಶಿವಗಂಗಾ ಚಿತ್ತಯ್ಯ, ಸಂದೇಶ್ಗೌಸ ಸಾಂತೇನಹಳ್ಳಿ, ರಾಜ ಸಿರಿಗೆರೆ, ತಿಮ್ಮಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.