ಚಿತ್ರದುರ್ಗ: ಕೋವಿಡ್ ಸೋಂಕಿನ ಕಾರಣಕ್ಕೆ ಮುಚ್ಚಿದ್ದ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳು ಶುಕ್ರವಾರ ಬಾಗಿಲು ತೆರೆದವು. ಹಬ್ಬದ ವಾತಾವರಣ ಸೃಷ್ಟಿಸಿದ ಶಿಕ್ಷಕರು, ಉಪನ್ಯಾಸಕರು ತರಗತಿಗೆ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಮೊದಲ ದಿನ ನಿರೀಕ್ಷೆಗೆ ತಕ್ಕಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿರಲಿಲ್ಲ. ಬಂದಿದ್ದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಬಗೆಗೆ ಅರಿವು ಮೂಡಿಸಲಾಯಿತು. ಪೋಷಕರ ಒಪ್ಪಿಗೆ ಪತ್ರ ತರುವುದರ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಶಾಲಾ–ಕಾಲೇಜು ಆವರಣದಲ್ಲಿ ಮಕ್ಕಳ ಕಲರವ ಕಂಡ ಬೋಧಕರ ಉತ್ಸಾಹ ಇಮ್ಮಡಿಗೊಂಡಿತು.

ದ್ವಿತೀಯ ಪಿಯು, ಎಸ್ಸೆಸ್ಸೆಲ್ಸಿ ತರಗತಿಗಳು ಶುಕ್ರವಾರದಿಂದ ಆರಂಭಗೊಂಡವು. 6ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಶಾಲಾ ಆವರಣದಲ್ಲಿಯೇ ‘ವಿದ್ಯಾಗಮ’ ಶುರುವಾಯಿತು. ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಧೈರ್ಯ ತುಂಬಿತು. ಮಕ್ಕಳನ್ನು ಶಾಲೆ–ಕಾಲೇಜುಗಳಿಗೆ ನಿರಾತಂಕವಾಗಿ ಕಳುಹಿಸುವಂತೆ ಶಿಕ್ಷಕರು ಮನವಿ ಮಾಡಿದರು.

ಮೊದಲ ದಿನ ಶಾಲೆ–ಕಾಲೇಜುಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬಾಳೆ ಕಂದು, ಮಾವಿನ ತೋರಣಗಳನ್ನು ಕಟ್ಟಲಾಗಿತ್ತು. ಪ್ರವೇಶ ದ್ವಾರದ ಬಳಿ ರಂಗೋಲಿ ಹಾಕಲಾಗಿತ್ತು. ತರಗತಿಗೆ ಹಾಜರಾಗುವ ಮಕ್ಕಳಲ್ಲಿ ಲವಲವಿಕೆ ಮೂಡಿಸುವ ಉದ್ದೇಶದಿಂದ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಪ್ರತಿ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗಿತ್ತು.

ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಒಂದು ಗಂಟೆ ಮೊದಲೇ ಶಾಲೆಗೆ ಹಾಜರಾಗಿದ್ದರು. ಮಕ್ಕಳು ಅಂತರ ಕಾಯ್ದುಕೊಳ್ಳುವಂತೆ ಆವರಣದಲ್ಲಿ ಬಾಕ್ಸ್ ಮಾರ್ಕಿಂಗ್ ಮಾಡಲಾಗಿತ್ತು. ಅರ್ಧ ಗಂಟೆ ಮೊದಲು ಹಾಜರಾದ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಹಾಕಿ ಶುಚಿಗೊಳಿಸಿಕೊಳ್ಳುವಂತೆ ಸೂಚಿಸಲಾಯಿತು. ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ಪ್ರವೇಶಾವಕಾಶ ನೀಡಲಾಯಿತು.

ಜಿಲ್ಲೆಯ 486 ಪ್ರೌಢಶಾಲೆ ಹಾಗೂ 125 ಕಾಲೇಜುಗಳು ಕಾರ್ಯಾರಂಭಗೊಂಡವು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಶಿಕ್ಷಕರು ಹಾಗೂ ಉಪನ್ಯಾಸಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ನಿಗದಿಯಂತೆ ಬೆಳಿಗ್ಗೆ 10ಕ್ಕೆ ತರಗತಿಗಳು ಆರಂಭವಾದವು. ಮಕ್ಕಳಿಗೆ ಮೂರು ಗಂಟೆ ತರಗತಿಗಳು ನಡೆದವು. ಹೆಚ್ಚು ವಿದ್ಯಾರ್ಥಿಗಳು ಇದ್ದ ಶಾಲೆಗಳಲ್ಲಿ ಪಾಳಿವಾರು ತರಗತಿ ನಡೆದವು.

ಮಕ್ಕಳ ಸಂಖ್ಯೆ ಕಡಿಮೆ:ಬಹುತೇಕ ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಪೋಷಕರ ಒಪ್ಪಿಗೆ ಪತ್ರ ತರುವ ವಿಚಾರದಲ್ಲಿ ಮಕ್ಕಳಲ್ಲಿ ಗೊಂದಲ ಉಂಟಾಗಿದ್ದು ಕಂಡುಬಂದಿತು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ 575 ವಿದ್ಯಾರ್ಥಿಗಳಲ್ಲಿ 15 ಮಕ್ಕಳು ಮಾತ್ರ ಕಾಲೇಜಿಗೆ ಹಾಜರಾಗಿದ್ದರು.

ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ಕರೆದು ತಿಳಿವಳಿಕೆ ನೀಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಿತ್ತು. ಕೆಲವರು ಕೈಯಲ್ಲಿ ಬರೆದ ಒಪ್ಪಿಗೆ ಪತ್ರದೊಂದಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು. ಸಿದ್ಧ ಮಾದರಿಯೊಂದನ್ನು ಮಕ್ಕಳ ಕೈಗಿಟ್ಟ ಶಿಕ್ಷಕರು, ಪೋಷಕರ ಒಪ್ಪಿಗೆ ಪಡೆದು ತರುವಂತೆ ಸೂಚಿಸಿದರು.

ಕೋವಿಡ್ ಪರೀಕ್ಷೆಗೆ ಪರದಾಟ:ಶಿಕ್ಷಕರು ಹಾಗೂ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಎಲ್ಲರೂ ಏಕಕಾಲಕ್ಕೆ ಪರೀಕ್ಷೆಗೆ ಒಳಪಡಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದವರು ಕರ್ತವ್ಯದಿಂದ ಹೊರಗೆ ಉಳಿಯಬೇಕಾಯಿತು.

‘ಎಲ್ಲ ಉಪನ್ಯಾಸಕರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕೋವಿಡ್ ಪರೀಕ್ಷೆಗೆ ಹಲವರು ಆಸ್ಪತ್ರೆಗಳನ್ನು ಸಂಪರ್ಕಿಸಿದ್ದಾರೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶೋಭಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.