ಚಿತ್ರದುರ್ಗ: ‘ಅಥಣಿ ಶಿವಯೋಗಿಗಳು ಯಾರಿಗೂ ಮಠಾಧಿಪತಿಯ ದೀಕ್ಷೆ ನೀಡಲಿಲ್ಲ. ಆದರೆ ವಿಚಾರಗಳ ಮೂಲಕ ಶಿಷ್ಯ ಪರಂಪರೆಯನ್ನು ಸೃಷ್ಟಿಸಿ ಜಂಗಮ ಜ್ಯೋತಿಗಳನ್ನು ಬೆಳಗಿಸಿದರು’ ಎಂದು ಸಾಹಿತಿ ವಿ.ಎಸ್.ಮಾಳಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಗುರುವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಶಿವಯೋಗಿ ಎಂದರೆ ಕೇವಲ ಆಧ್ಯಾತ್ಮಿಕ ಸಾಧನೆ ಮಾತ್ರವಲ್ಲ. ಅದು ಸಮತ್ವದ ಚಿತ್ತ ಸ್ಥಿತಿಯೂ ಹೌದು ಎಂಬುದನ್ನು ತಮ್ಮ ನಡೆ ನುಡಿಯಿಂದ ತೋರಿದರು. ಕರ್ನಾಟಕದ ಉತ್ತರ ತುದಿಯಿಂದ ದಕ್ಷಿಣದ ಶಂಭುಲಿಂಗನ ಬೆಟ್ಟದವರೆಗೂ ಅವರ ಶಿಷ್ಯಲೋಕದ ವ್ಯಾಪ್ತಿ ಹರಡಿದೆ’ ಎಂದರು.

‘ಗುರುಗಳು ಮಠಾಧಿಪತಿ ಆಗಲಿಲ್ಲ, ಆದರೆ ನೂರಾರು ಸ್ವಾಮೀಜಿಗಳನ್ನು ಮಠಾಧಿಪತಿಗಳನ್ನಾಗಿಸಿದರು. ಇದು ನಿಜವಾದ ಶಿವಯೋಗದ ಸಾಧನೆ. ಶಿವಯೋಗಿಗಳು ಅಪ್ಪಟ ಬಸವ ಅಭಿಮಾನಿಗಳು. ಬಸವತತ್ವದ ನಿಷ್ಠರಾಗಿದ್ದರು ಎಂದು ತಿಳಿಸಿದರು.

‘ಗಚ್ಚಿನ ಮಠದಲ್ಲಿ ಭಕ್ತವರ್ಗದ ಬಣಜಿಗ ಮನೆತನದ ಸಿದ್ದಲಿಂಗಪ್ಪಗಳನ್ನು ಮಠಾಧಿಪತಿಗಳನ್ನಾಗಿಸಿದ್ದು ಈ ಕಾಲದಲ್ಲೂ ಒಂದು ಕ್ರಾಂತಿಯೇ ಸರಿ. ಶಿವಯೋಗಿಗಳು ಸಮಾಜಮುಖಿ ಮಠಾಧೀಶರಾಗಿ ಮಾರ್ಗದರ್ಶಕರಾಗಿದ್ದರು. ಸಾವಿರಾರು ಜನರನ್ನು ಉದ್ದಾರ ಮಾಡಿದ ಅಪರೂಪದ ಮಹಾ ಮಹಿಮರು’ ಎಂದು ಸ್ಮರಿಸಿದರು.

‘ಮುರುಘಾ ಪರಂಪರೆಯು ಶತಮಾನಗಳಿಂದ ಮೌಲಿಕ ಮತ್ತು ಮಹತ್ವದ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಇದನ್ನು ಮುಂದಿನ ಸಮುದಾಯಕ್ಕೆ ತಿಳಿಸಬೇಕಾಗಿದೆ. ಇಂದು ಸಂವಿಧಾನದ ಆಶಯಗಳನ್ನು ಈ ಹಿಂದೆಯೇ ನಮ್ಮ ಬಸವಾದಿ ಶರಣರು ಜಾರಿಗೆ ತಂದಿದ್ದರು’ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.

‘ತಳಸಮದಾಯ, ಶೋಷಿತರ ಪರವಾಗಿ ಸಮ ಸಮಾಜದ ನಿರ್ಮಾಣಕ್ಕೆ ಅಥಣಿ ಶಿವಯೋಗಿಗಳು ತಮ್ಮ ಹೃದಯದಲ್ಲಿ ಸಮತ್ವದ ಭಾವವನ್ನು ಕೂರಿಸಿಕೊಂಡಿದ್ದರು. ಶಿವಯೋಗಿಗಳ ಬದುಕು ಇಂದಿನ ಎಲ್ಲಾ ಮಠಾಧಿಪತಿಗಳಿಗೆ ಪ್ರೇರಣೆ ಆದರ್ಶವಾಗಬೇಕು. ಏಕೆಂದರೆ ಅವರು ಸತ್ಯ ಶುದ್ಧವಾಗಿ ತಮ್ಮ ಬದುಕನ್ನು ಪ್ರಾಯೋಗಿಕವಾಗಿ ರೂಪಿಸಿಕೊಂಡಿದ್ದರು’ ಎಂದರು.

‘ಅಧಿಕಾರ, ಪದವಿ, ಪ್ರಶಸ್ತಿಗಳನ್ನು ಎಂದು ಸ್ವೀಕರಿಸಿದವರಲ್ಲ. ನಾನು ಮಠದ ಸೇವೆ ಮಾಡಬೇಕೆಂದು ಹೇಳುತ್ತಿದ್ದರು. ಬಸವ ತತ್ವಗಳನ್ನು ನಿಜಸ್ವರೂಪದಲ್ಲಿ ಅತ್ಯಂತ ವೈಚಾರಿಕ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದರು. ಅವರ ವಿಚಾರಧಾರೆಗಳು ವಿಶ್ವಮಾನವ ಪರಿಕಲ್ಪನೆಯಲ್ಲಿದ್ದವು. ಬ್ರಹ್ಮಾಂಡದ ಚೈತನ್ಯ ಸ್ವರೂಪ ಶಿವಯೋಗಿಗಳು, ಬಸವಣ್ಣರ ಸ್ವರೂಪವೇ ಆಗಿದ್ದರು’ ಎಂದು ತಿಳಿಸಿದರು.

ನಿಡುಸೂಸಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮಲಿಂಗೇಶ್ವರ ಸ್ವಾಮೀಜಿ, ಇಳಕಲ್ನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಪ್ರಾಧ್ಯಾಪಕ ಡಾ.ಎಂ.ಎಸ್.ಉಕ್ಕಲಿ, ಗುರುಮಠಕಲ್ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಇದ್ದರು.

ನಾಡುಕಂಡಂತಹ ಶ್ರೇಷ್ಠ ಗುರುಗಳು ಅಥಣಿ ಶಿವಯೋಗಿಗಳು. ಅವರ ಸಾಧನೆಯ ಮೌಲ್ಯಗಳು ದಾರಿ ದೀಪವಾಗಿವೆ. ಮನಸ್ಸಿನಲ್ಲಿಯೂ ಹಿಂಸೆ ಮಾಡದ ಅಹಿಂಸಾ ಪರಮೋಧರ್ಮಿಯಾಗಿದ್ದರು

–ಬಸವಕುಮಾರ ಸ್ವಾಮೀಜಿ ಆಡಳಿತ ಮಂಡಳಿ ಸದಸ್ಯರು ಎಸ್ಜೆಎಂ ವಿದ್ಯಾಪೀಠ

ಏಕಾಗ್ರತೆಯಿಂದ ಬದುಕಿನಲ್ಲಿ ಯಶಸ್ಸು

‘ಯಾರು ಏಕಾಗ್ರತೆ ಸಾಧಿಸುತ್ತಾರೆಯೋ ಅವರು ಬದುಕಿನಲ್ಲಿ ಸಾಧನೆ ಮಾಡುತ್ತಾರೆ. ಇಲ್ಲವಾದರೆ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಗುರುಮಠಕಲ್ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು. ಮಠದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿದ ಅವರು ‘ಏಕಾಗ್ರತೆಯಿಂದ ಧ್ಯಾನ ಮಾಡಿದವರಿಗೆ ಮಾತ್ರ ಶಿವಯೋಗ ದೊರೆಯುತ್ತದೆ. ಮುರುಘಾ ಪರಂಪರೆಯೆಂದರೆ ಭಕ್ತರಿಗೆ ಶಿವಯೋಗವನ್ನು ಕಲಿಸುವುದಾಗಿದೆ. ಯಾರಿಗೆ ಹಸಿವಿರುತ್ತದೆಯೋ ಅವರಿಗೆ ಸಾಧನೆಯು ಲಭಿಸುತ್ತದೆ’ ಎಂದರು. ‘ನಿತ್ಯ ಶಿವಯೋಗ ಮಾಡಿದರೆ ಆಧ್ಯಾತ್ಮದ ಹಸಿವು ನಿವಾರಣೆಯಾಗುತ್ತದೆ. ಪ್ರತಿದಿನ ಹದಿನೈದು ನಿಮಿಷ ಶಿವಯೋಗ ಮಾಡಿ ಅದು ನಿಮ್ಮ ಜೀವನ ಉದ್ಧಾರ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಯಾರು ಶಿವಯೋಗ ಮಾಡುತ್ತಾರೋ ಅವರ ಮನೆ ಮಹಾಮನೆಯಾಗುತ್ತದೆ’ ಎಂದು ತಿಳಿಸಿದರು. ‘ಸಂತೋಷ ಶಿಸ್ತಿನಿಂದ ಕಾಯಕ ಮಾಡಿದರೆ ಅದು ಜೀವನಕ್ಕೆ ಸಹಾಯಕವಾಗುತ್ತದೆ. ವಚನ ಹೇಳುವುದನ್ನು ಹಿರಿಯರು ಮಕ್ಕಳಿಗೆ ತಿಳಿಸಬೇಕು. ಅವರು ಮುಂದೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಲ್ಲವಾದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ’ ಎಂದರು. ಚಿಗರಹಳ್ಳಿ ಮರುಳಶಂಕರದೇವ ಗುರುಪೀಠದ ಸಿದ್ದಬಸವ ಕಬೀರ ಸ್ವಾಮೀಜಿ ಶಿರಗುಪ್ಪ ಬಸವಕೇಂದ್ರದ ಬಸವಭೂಷಣ ಸ್ವಾಮೀಜಿ ಗೋರಚಿಂಚೋಳಿ ಸಿದ್ದರಾಮೇಶ್ವರಮಠದ ಸಿದ್ದರಾಮ ಪಟ್ಟದೇವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.