ಸಿರಿಗೆರೆ: ‘ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಕಲಿಸಬೇಕು. ಕನ್ನಡವೇ ನಮ್ಮ ಪ್ರಧಾನ ಭಾಷೆ’ ಎಂದು ಅರೇಕಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ತಿಳಿಸಿದರು.

ಭೀಮ ಸಮುದ್ರದ ಭೀಮೇಶ್ವರ ಬಾಲವಿಕಾಸ ಹಿರಿಯ ಪ್ರಾಥಮಿಕ ಶಾಲೆಗೆ 40 ವರ್ಷಗಳು ತುಂಬಿದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್ ಭಾಷೆಯ ವ್ಯಾಮೋಹ ಎಲ್ಲ ಕಡೆ ಹೆಚ್ಚಾಗಿದೆ. ಮಕ್ಕಳಿಗೆ ಮೊದಲು ಕನ್ನಡ ಕಲಿಸೋಣ. ನಂತರ ಅವರು ಬೇರೆ ಭಾಷೆಗಳನ್ನು ಕಲಿಯುತ್ತಾರೆ’ ಎಂದರು.

ಮಕ್ಕಳು ಮೊಬೈಲ್, ಟಿ.ವಿ, ಬಳಸುವುದನ್ನು ಕಡಿಮೆ ಮಾಡಿ ಶಾಲಾ ಪುಸ್ತಕಗಳ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದರು.

‘ಗ್ರಾಮದ ಹಿರಿಯರು ಮಕ್ಕಳ ಅಭ್ಯುದಯಕ್ಕೆ ಆರಂಭಿಸಿದ ಶಾಲೆಗೆ ಈಗ 40 ವರ್ಷಗಳು ತುಂಬಿವೆ. ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಹಲವು ಕಡೆ ಉನ್ನತ ಸ್ಥಾನಗಳಲ್ಲಿದ್ದಾರೆ. ಅವರಂತೆಯೇ ಈಗಿನ ವಿದ್ಯಾರ್ಥಿಗಳೂ ಬಹಳ ಎತ್ತರಕ್ಕೆ ಬೆಳೆಯಬೇಕು’ ಎಂದು ಉದ್ಯಮಿ ಜಿ.ಎಸ್. ಮಂಜುನಾಥ್ ಸಲಹೆ ನೀಡಿದರು.

ಬಾಲ ವಿಕಾಸ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಧನ್ಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಜಿ.ಎಸ್. ಅನಿತ್ ಕುಮಾರ್, ಬಿ.ಟಿ. ಪುಟ್ಟಪ್ಪ, ಟಿ.ಎಸ್. ಪ್ರಭುದೇವ್, ತಿಪ್ಪೇಸ್ವಾಮಿ, ಮಂಜುನಾಥ್, ಟಿ.ಎಸ್. ರಾಜಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶರತ್ ಪಟೇಲ್, ಎಲ್.ಕೆ. ಸುಮಾ ಮತ್ತಿತರರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.