ಚಿತ್ರದುರ್ಗ: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳು ಕಾರಾಗೃಹದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳಿಂದ ನಿಯಮಬಾಹಿರ ಚಟುವಟಿಕೆ ನಡೆಯುತ್ತಿವೆ ಎಂಬ ಸುಳಿವಿನ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ದಿಢೀರ್ ಭೇಟಿ ನೀಡಿದರು. 22 ಸಿಬ್ಬಂದಿಯ 5 ತಂಡ ಕಾರಾಗೃಹದ ಆವರಣ ಹಾಗೂ ಬಂಧಿಖಾನೆಗಳನ್ನು ಪರಿಶೀಲನೆ ನಡೆಸಿತು.

ಈ ವೇಳೆ ಕಾರಾಗೃಹ ಸಿಬ್ಬಂದಿಗಳಾದ ರಾಮಣ್ಣ ಹೆರಕಲ್, ದಾದಾಪೀರ್, ಕುತುಬುದ್ದೀನ್ ವಾಲೀಕರ್, ವೆಂಕಟೇಶ್ ಹಾಗೂ ಪೊಲೀಸ್ ಸಿಬ್ಬಂದಿ ಎಚ್.ಸಿ.ಭರತ್ ಕುಮಾರ್ ಇವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಸುಮಾರು 60 ಗ್ರಾಂ ಒಣ ಗಾಂಜಾ ಸೊಪ್ಪು, 3 ಮೊಬೈಲ್ ಫೋನ್, ಬೀಡಿ ಕಟ್ಟು, ಬೆಂಕಿಪೊಟ್ಟಣ ಮತ್ತು ಗಾಂಜಾ ಸೇದಲು ಬಳಸುವ ಚಿಮಣಿಗಳನ್ನು ವಶಪಡಿಸಿಕೊಂಡರು.

ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಗಳಾದ ಖಲಂದರ್, ಶಫೀವುಲ್ಲಾ, ತಿಮ್ಮೇಶ, ಅಬೀದ್ ಖಾನ್, ಶಾಹಿದ್ ಕುರೇಷಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡಿದ್ದ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಬೀದ್ ಖಾನ್, ಶಾಹಿದ್ ಕುರೇಷಿ ವಿರುದ್ಧ ನಿಯಮಬಾಹಿರ ಚಟುವಟಿಕೆ ನಡೆಸಿದ್ದಕ್ಕೆ ದೂರು ದಾಖಲಿಸಲಾಗಿದೆ.

ಪೊಲೀಸ್ ಉಪಾಧೀಕ್ಷಕರಾದ ಉಮೇಶ್ ಈಶ್ವರ್ ನಾಯ್ಕ್, ಟಿ.ಎಂ.ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.