ಸಿರಿಗೆರೆ: ಜಗತ್ತಿನ ಪ್ರಸಿದ್ಧ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ರೂಪಿಸಿರುವ ಕಂಪ್ಯೂಟರ್ ಆ್ಯಪ್ ಶಿವಶರಣರ ವಚನ ಸಂಪುಟ ಲೋಕಾರ್ಪಣೆಗೊಂಡಿದೆ.

ಅಲ್ಲಿನ ಬಾಲಾಜಿ ದೇವಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅನಿವಾಸಿ ಭಾರತೀಯ, ಹಳೇಬೀಡು ಮೂಲದ ವಿಶೃತ್ ಶ್ರೀ ಅವರು ಕಂಪ್ಯೂಟರ್ ಅಪ್ಲಿಕೇಷನ್ ಅನಾವರಣಗೊಳಿಸಿದರು.

‘ಶ್ರೀ ಅವರು ರೂಪಿಸಿರುವ ಕಂಪ್ಯೂಟರ್ ಅಪ್ಲಿಕೇಷನ್ ಬಗ್ಗೆ ಮಾಹಿತಿ ಇತ್ತು. 12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ ಮುಂತಾದ ಶರಣರ 22 ಸಾವಿರ ವಚನಗಳು ಇವೆ. ದೇಶ ಸುತ್ತುವಾಗಲೆಲ್ಲ ಈ ವಚನಗಳ ಸಂಪುಟ ನಮ್ಮ ಸಂಗಡವೇ ಪ್ರಯಾಣ ಮಾಡುತ್ತದೆ. ಅಂತಹ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ವಚನಗಳು ಲಭ್ಯವಿರುವುದು ಸಂತಸದ ವಿಷಯ ಎಂದು ಹೇಳಿದರು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಾನ್ ಜೋಷ್ ದೇವಾಲಯದ ಪೀಠಾಧಿಪತಿ ನಾರಾಯಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಹತ್ತು ಲಕ್ಷ ಜನರಿಂದ ವೀಕ್ಷಣೆ: ಪ್ಲೇ ಸ್ಟೋರ್ ಮೂಲಕ ವಚನ ಸಂಪುಟವನ್ನು ಮೊಬೈಲ್ಗಳಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದುವರೆಗೆ ಹತ್ತು ಲಕ್ಷಕ್ಕೂ ಮೀರಿ ಆಸಕ್ತರು ತಂತ್ರಾಂಶವನ್ನು ವೀಕ್ಷಿಸಿದ್ದಾರೆ. ವಚನ ಸಾಹಿತ್ಯ ಕುರಿತು ಅಂತರ್ಜಾಲದಲ್ಲಿ ಲಭ್ಯವಿರುವ ತಂತ್ರಾಂಶಗಳಲ್ಲಿ ವಚನ ಸಂಪುಟಕ್ಕೆ ದೊರೆತಿರುವಷ್ಟು ಮನ್ನಣೆ ಬೇರೆ ತಂತ್ರಾಂಶಗಳಿಗೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.