ಶನಿವಾರ, ಜನವರಿ 25, 2020
22 °C

ಮಕ್ಕಳಿಂದ ಭಗವದ್ಗೀತೆ ಪಠಣ: ಭಗವದ್ಗೀತೆ ಪ್ರವೇಶಕ್ಕೆ ಇಳೆ ತಂಪು-ಸ್ವರ್ಣವಲ್ಲಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಾಲ್ಕು ತಿಂಗಳ ಹಿಂದೆ ಮಳೆ ಕೊರತೆ ಎದುರಿಸುತ್ತಿದ್ದ ಚಿತ್ರದುರ್ಗ ಜಿಲ್ಲೆಗೆ ಭಗವದ್ಗೀತೆ ಪ್ರವೇಶದಿಂದ ವರುಣ ಧರೆಗೆ ಇಳಿದಿದೆ. ಇಳೆ ಕೂಡ ತಂಪಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಗತ್ತಿನ ತಾಪಮಾನ ಏರುತ್ತಿದೆ. ಆದರೆ, ಚಿತ್ರದುರ್ಗದ ತಾಪಮಾನ ಮಾತ್ರ ಇಳಿಕೆ ಆಗಿದೆ. ಸಮೃದ್ಧ ಮಳೆ ಕೂಡ ಆಗಿದೆ. ಗೀತೆಗೆ ಅಂತಹ ಶಕ್ತಿ ಇದೆ ಎಂದು ಪ್ರತಿಪಾದಿಸಿದರು.

ಪ್ರತಿದಿನ ಗೀತೆ ಓದುವ ಅಭ್ಯಾಸ ಮಾಡಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನ ಆಗುತ್ತದೆ. ನೆಮ್ಮದಿಯ ಬದುಕು ಸಿಗುತ್ತದೆ ಎಂದು ಹೇಳಿದರು.

ನೈತಿಕತೆಯ ಅಧಃಪಥನದಿಂದ ಅಪರಾಧ ಪ್ರಕರಣ ಹೆಚ್ಚಾಗಿವೆ. ಅತ್ಯಾಚಾರ, ಆತ್ಮಹತ್ಯೆ ಪ್ರಕರಣ ಏರುತ್ತಿರುವುದು ಮನಸ್ಸು ಹದಗೆಟ್ಟ ಸೂಚನೆ. ಶಿಕ್ಷಣದ ಜೊತೆಗೆ ಅಧ್ಯಾತ್ಮದ ಸಂಸ್ಕಾರ ಸಿಗಬೇಕು ಎಂದರು.

ಕಾರ್ಯಕ್ರಮದಲ್ಲಿ ಐದು ಸಾವಿರ ಮಕ್ಕಳು ಏಕಕಾಲಕ್ಕೆ ಭಗವದ್ಗೀತೆ ಪಠಣ ಮಾಡಿದ ರೀತಿ ಆಕರ್ಷಕವಾಗಿತ್ತು.

ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಬಿರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು