ಚಿತ್ರದುರ್ಗ: ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಷಟಲ್ ಬ್ಯಾಡ್ಮಿಂಟಲ್ ಕೋರ್ಟ್, ಲಾನ್ ಟೆನಿಸ್, ವಾಲಿಬಾಲ್, ಟೇಬಲ್ ಟೆನಿಸ್ ಕೋರ್ಟ್ಗಳು ಹದಗೆಟ್ಟಿದ್ದು ಕ್ರೀಡಾಸಕ್ತರಿಗೆ ನಿರಾಸೆ ಉಂಟಾಗಿದೆ. ಒಳಾಂಗಣ ಕ್ರೀಡಾಂಗಣದ ಚಾವಣಿ ಸೋರುತ್ತಿದ್ದು, ಮಳೆ ಬಂದರೆ ಕ್ರೀಡಾ ಸಮುಚ್ಚಯವೇ ಬಂದ್ ಆಗುವ ಪರಿಸ್ಥಿತಿ ಇದೆ.

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ಅಪಾರ ಸಂಖ್ಯೆಯ ಜನರು ವಿಹಾರ ಮಾಡುತ್ತಾರೆ. ಕ್ರೀಡಾ ಮತ್ತು ಯುವಜನ ಇಲಾಖೆ ಕ್ರೀಡಾಸಕ್ತರಿಗೆ ವಿವಿಧ ಸೌಲಭ್ಯಗಳನ್ನು ನೀಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಿಮ್, ಒಳಾಂಗಣ ಕ್ರೀಡಾಂಗಣ, ವಿವಿಧ ಆಟೋಟಗಳ ಅಂಗಳ ನಿರ್ಮಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಅಂಕಣಗಳು ಕ್ರೀಡಾಪಟುಗಳ ಉಪಯೋಗಕ್ಕೆ ಬಾರದಾಗಿವೆ.

ಒಳಾಂಗಣ ಕ್ರೀಡಾಂಗಣದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕ್ರೀಡಾಸಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲಿ ಷಟಲ್ ಬ್ಯಾಡ್ಮಿಂಟನ್ ಹಾಗೂ ಜಿಮ್ ಇದ್ದು ನಿತ್ಯ ನೂರಾರು ಜನರು ಆಟ ಹಾಗೂ ವ್ಯಾಯಾಮ ಮಾಡಲು ಬರುತ್ತಾರೆ. ಒಳಾಂಗಣ ಕ್ರೀಡಾಂಗಣದ ಚಾವಣಿ ಸೋರುತ್ತಿದ್ದು, ಷಟಲ್ ಕೋರ್ಟ್ ಹಾಳಾಗಿದೆ.

ಗೋಡೆಗಳಲ್ಲಿ ನೀರಿಳಿದಿದ್ದು ಬಿರುಕು ಬಿಟ್ಟಿವೆ. ನೆಲಹಾಸಿನ ಮರದ ಪಟ್ಟಿಗಳು ತೇವಾಂಶದಿಂದ ಕಿತ್ತುಬಂದಿವೆ. ಆಟಗಾರರು ಅದರ ನಡುವೆಯೇ ಆಡುವ ಪರಿಸ್ಥಿತಿ ಇದೆ. ಕಿತ್ತುಹೋದ ಮರದ ಪಟ್ಟಿ ಕಾಲಿಗೆ ತಗುಲಿ ಹಲವರು ಗಾಯಮಾಡಿಕೊಂಡ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅಂಗಳದಲ್ಲಿ ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ, ಅಲ್ಲಿಗೆ ನೀರಿನ ಸಂಪರ್ಕವೇ ಇಲ್ಲದ ಕಾರಣ ಪ್ಲಾಂಟ್ ಹಾಳಾಗಿದೆ. ಶೌಚಾಲಯವೂ ಇಲ್ಲದೇ ಜನರು ಪರದಾಡುವ ಪರಿಸ್ಥಿತಿ ಇದೆ.

‘ಷಟಲ್ ಕೋರ್ಟ್ ಹಲವು ವರ್ಷಗಳಿಂದಲೂ ಹಾಳಾದ ಸ್ಥಿತಿಯಲ್ಲೇ ಇದೆ. ಮಳೆ ಬಂದಾಗ ವಿದ್ಯುತ್ ದೀಪಗಳು ಹಾಳಾಗುತ್ತವೆ. ನಾವೇ ಸಣ್ಣಪುಟ್ಟ ದುರಸ್ತಿ ಮಾಡಿಸಿಕೊಂಡು ಬಳಸುತ್ತಿದ್ದೇವೆ. ದುರ್ಗದಲ್ಲಿ ನಮಗೆ ಬೇರೆ ಕ್ರೀಡಾ ಸೌಲಭ್ಯಗಳು ಇಲ್ಲದ ಕಾರಣ ಇದನ್ನೇ ಬಳಸಬೇಕಾದ ಪರಿಸ್ಥಿತಿ ಇದೆ’ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದರು.

‘ಷಟಲ್ ಕೋರ್ಟ್ಗೆ ಕ್ರೀಡಾಸಕ್ತರಿಂದ ಪ್ರತಿ ತಿಂಗಳು ₹ 500 ಶುಲ್ಕ, ಜಿಮ್ಗೆ ₹ 600 ಶುಲ್ಕ ಪಡೆಯಲಾಗುತ್ತದೆ. ಆದರೆ ಸೌಲಭ್ಯಗಳನ್ನೇ ನೀಡದೇ ಶುಲ್ಕ ವಸೂಲಿ ಮಾಡುತ್ತಾರೆ. ಈ ಕುರಿತು ಹಲವು ಬಾರಿ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ’ ಎಂಬುದು ಕ್ರೀಡಾಸಕ್ತರ ದೂರು.

ಷಟಲ್ ಕೋರ್ಟ್ ಕಟ್ಟಡದ ಪಕ್ಕದಲ್ಲೇ ಇರುವ ಟೇಬಲ್ ಟೆನ್ನಿಸ್ ಕೋರ್ಟ್ ಸದಾ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿರುತ್ತದೆ. ಅಲ್ಲಿ ಯಾವ ಸೌಲಭ್ಯಗಳೂ ಇಲ್ಲದ ಕಾರಣ ಸದಾ ಬಂದ್ ಆದ ಸ್ಥಿತಿಯಲ್ಲಿದೆ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಈಜುಗೊಳ ಮಾತ್ರ ಉತ್ತಮ ನಿರ್ವಹಣೆಗೆ ಪ್ರಸಿದ್ಧಿ ಪಡೆದಿದೆ. ಉಳಿದ ಸೌಲಭ್ಯಗಳೆಲ್ಲವೂ ಇಲ್ಲವಾಗಿದ್ದು, ಕಾಯಕಲ್ಪಕ್ಕೆ ಕಾಯುತ್ತಿವೆ.

‘ವಾಲಿಬಾಲ್ ಕೋರ್ಟ್ನಲ್ಲಿ ಗುಂಡಿಗಳಾಗಿವೆ. ಜಿಲ್ಲೆಯಲ್ಲಿ ವಾಲಿಬಾಲ್ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ಈ ಕೋರ್ಟ್ ದುರಸ್ತಿಯಾಗಿಲ್ಲ. ಲಾನ್ ಟೆನಿಸ್ ಕೋರ್ಟ್ ಕೂಡ ಹಾಳಾಗಿದ್ದು, ದುರಸ್ತಿಗಾಗಿ ಕಾಯುತ್ತಿದೆ’ ಎಂದು ಯುವ ಕ್ರೀಡಾಪಟು ಶ್ರೀಧರ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಅಂಕಣಗಳ ದುರಸ್ತಿಗಾಗಿ ₹ 1 ಕೋಟಿ ವ್ಯಯಿಸಲಾಗುತ್ತಿದೆ. ಜಿಲ್ಲಾ ಖನಿಜ ನಿಧಿಯಿಂದ ಹಣ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
–ಸುಚೇತಾ ಎಂ.ನೆಲವಗಿ, ಸಹಾಯಕ ನಿರ್ದೇಶಕಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ

ಹಾಳಾದ ಅತ್ಯಾಧುನಿಕ ಟ್ರೆಡ್ಮಿಲ್

ಒಳಾಂಗಣ ಕ್ರೀಡಾಂಗಣದ ಮಲ್ಟಿ ಜಿಮ್ನಲ್ಲಿ ಹಲವು ಪರಿಕರ ಹಾಳಾಗಿದ್ದು ಬಳಕೆಗೆ ಅಯೋಗ್ಯವಾಗಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 2 ಅತ್ಯಾಧುನಿಕ ಟ್ರೆಡ್ಮಿಲ್ಗಳಿದ್ದು ಒಂದೂ ಕೆಲಸ ಮಾಡುತ್ತಿಲ್ಲ. 4 ತಿಂಗಳ ಹಿಂದಷ್ಟೇ ಅಳವಡಿಸಲಾಗಿದ್ದ ಟ್ರೆಡ್ಮಿಲ್ಗಳು ಇದ್ದೂ ಇಲ್ಲದಂತಿವೆ. ಅಧಿಕಾರಿಗಳು ಅವುಗಳನ್ನು ದುರಸ್ತಿ ಮಾಡಿಸಿಲ್ಲ.

‘ಕೋವಿಡ್ ಸಂದರ್ಭದಲ್ಲೇ ಖರೀದಿಸಿದ್ದ ಟ್ರೆಡ್ಮಿಲ್ಗಳು ಅಧಿಕಾರಿಯೊಬ್ಬರ ಮನೆಯಲ್ಲಿದ್ದವು ಎಂಬ ಆರೋಪವಿದೆ. ಹಾಳಾದ ನಂತರ ಇಲ್ಲಿಗೆ ತಂದು ಇಟ್ಟಿದ್ದಾರೆ. ಹಲವು ಅವ್ಯವಹಾರ ನಡೆದಿದ್ದು ಅವುಗಳ ಬಗ್ಗೆ ತನಿಖೆಯಾಗಬೇಕು’ ಎಂದು ಜಿಮ್ ಪ್ರಿಯರೊಬ್ಬರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.