ಹಿರಿಯೂರು: ನಗರದ ವೀರಶೈವ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ₹ 14.49 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ಬಿ. ಶಿವಕುಮಾರ್ ತಿಳಿಸಿದರು.
ಸಂಘದ ಕಟ್ಟಡದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಷೇರುದಾರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಆರ್.ಟಿ. ನಾಗರಾಜ್, ನಿರ್ದೇಶಕರಾದ ವಿ. ಮಂಜುನಾಥ್, ಸಿ. ಸಿದ್ದರಾಮಣ್ಣ, ಬಿ. ರತ್ನಮ್ಮ, ಡಿ.ಎಸ್. ಮಹೇಶ್, ಸಿದ್ಧಗಂಗಯ್ಯ, ವಿ. ವೇದಾವತಿ, ಉಗ್ರನರಸಿಂಹಯ್ಯ, ಕೆ. ಮಮಂತೇಶ್, ಎಂ. ಯಶೋಧರ, ವ್ಯವಸ್ಥಾಪಕ ಪ್ರಸನ್ನ ಕುಮಾರ್ ಹಾಜರಿದ್ದರು.