ಧರ್ಮಪುರ: ಇಲ್ಲಿನ ನಿವಾಸಿ, ಕೂಲಿ ಕಾರ್ಮಿಕ ಮೆಹಬೂಬ್ ಬಾಷಾ (40) ಹೃದಯಾಘಾತದಿಂದ ಕುಸಿದುಬಿದ್ದು ಭಾನುವಾರ ಮೃತಪಟ್ಟರು.
ಅವರು ಬೆಳಿಗ್ಗೆ ಚಹಾ ಕುಡಿಯಲು ಟೀ ಸ್ಟಾಲ್‌ಗೆ ಬಂದಿದ್ದರು. ಅಲ್ಲಿಯೇ ಹೃದಯಾಘಾತ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಇಲ್ಲಿನ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಅವರು ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಸಂತೋಷ್ ನಗರದವರಾಗಿದ್ದು, ಇಲ್ಲಿನ ಮುಸ್ಲಿಂ ಯುವಕರು ಅಂತ್ಯಸಂಸ್ಕಾರಕ್ಕೆ
ಆರ್ಥಿಕ ನೆರವು ನೀಡಿ ಪಾರ್ಥಿವ ಶರೀರವನ್ನು ಸಂತೋಷ್ ನಗರಕ್ಕೆ ಕಳುಹಿಸಿ ಮಾನವೀಯತೆ ಮೆರೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.