ಚಿತ್ರದುರ್ಗ: ‘ವ್ಯಸನಗಳು ವಿದ್ಯಾರ್ಥಿಗಳ ಶಕ್ತಿ, ಚೈತನ್ಯವನ್ನು ಕಸಿಯುತ್ತಿರುವ ಹೊತ್ತಿನಲ್ಲಿ ನಶಾಮುಕ್ತ ಕ್ಯಾಂಪಸ್, ಆರೋಗ್ಯಪೂರ್ಣ ಯುವ ಕರ್ನಾಟಕವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್ ಹೇಳಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಜಿಲ್ಲೆಯ ಸಂಯೋಜಿತ ಕಾಲೇಜುಗಳ ಸಹಯೋಗದಲ್ಲಿ ಬುಧವಾರ ನಡೆದ ನಶಾಮುಕ್ತ ಭಾರತ, ಅಂಗಾಂಗ ದಾನ ಜಾಗೃತಿ ಅಭಿಯಾನ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪಾಠ, ಪರೀಕ್ಷೆ, ಫಲಿತಾಂಶದಂತಹ ಜವಾಬ್ದಾರಿಗಳ ಜತೆಗೆ ವಿದ್ಯಾರ್ಥಿಗಳ ಭದ್ರ ಭವಿಷ್ಯ ಹಾಗೂ ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಆರೋಗ್ಯ ವಿವಿ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಬಗ್ಗೆ, ಅವರ ಕುಟುಂಬ ಹಾಗೂ ಸಮಾಜದ ಬಗೆಗೆ ನಾವು ಹೊಂದಿರುವ ಕಾಳಜಿ ಹಾಗೂ ಕಳಕಳಿಯ ಭಾಗವಾಗಿ ಕಳೆದ ಮೂರು ತಿಂಗಳಿಂದ ಜಿಲ್ಲೆಗಳಿಗೆ ಸಂಚರಿಸಿ ಜಾಗೃತಿ ನಡೆಸಲಾಗುತ್ತಿದೆ’ ಎಂದರು.

‘ನಮ್ಮ ಎಲ್ಲಾ 1,500 ಕಾಲೇಜು ಆವರಣಗಳನ್ನು ನಶಾಮುಕ್ತಗೊಳಿಸುವುದು ಹಾಗೂ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ’ ಎಂದರು.

‘ತರಗತಿಗಳಲ್ಲಿ, ಕ್ಯಾಂಪಸ್ಗಳಲ್ಲಿ ಯಾವುದೇ ವಿಧದ ಮಾದಕ ದ್ರವ್ಯ ಸೇವಿಸುವುದಿಲ್ಲ. ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು. ಡ್ರಗ್, ಮದ್ಯಪಾನ, ತಂಬಾಕು ಸೇವನೆಯಿಂದ ದೂರು ಉಳಿಯುವ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಪ್ರತಿ ವರ್ಷ 17,000 ಅಂಗಾಂಗ ಕಸಿ ನಡೆಯುತ್ತಿವೆ. ಆದರೆ ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 3 ಲಕ್ಷಕ್ಕೂ ಅಧಿಕವಿದೆ. ಅಂಗಾಂಗ ದಾನ ಇಂದಿನ ತುರ್ತು ಅಗತ್ಯವಾಗಿದ್ದು, ಸಾರ್ವಜನಿಕರಲ್ಲೂ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಂಗಾಂಗ ದಾನದ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನೀವು ಕೈಗೊಳ್ಳುವ ಒಂದು ಸಣ್ಣ ನಿರ್ಧಾರದಿಂದ ಎಂಟು ಜನರ ಜೀವ ಉಳಿಯಬಲ್ಲದು’ ಎಂದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ ‘ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆ ಸಮಾಜದಲ್ಲಿ ಅತ್ಯುತ್ತಮ ಸೇವೆ. ಪರಿವರ್ತನೆ ತರುವ ಶಕ್ತಿ ಹಾಗೂ ಅವಕಾಶ ಇರುವುದು ಇದೇ ವೃತ್ತಿಯಲ್ಲಿ. ಇನ್ನೊಂದು ಜೀವ ಉಳಿಸುವ ಅವಕಾಶ ವೈದ್ಯಕೀಯ ವೃತ್ತಿಯಲ್ಲಿದೆ. ಈ ವೃತ್ತಿಯಲ್ಲಿರುವ ಯುವಜನರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದರು.

‘ವಿಶ್ವವಿದ್ಯಾಲಯವೊಂದು ರಸ್ತೆಗೆ ಇಳಿದು ಜನಜಾಗೃತಿಯಲ್ಲಿ ತೊಡಗುವುದು ಅಪರೂಪ. ವಿಶ್ವವಿದ್ಯಾಲಯದ ಕುಲಪತಿ ಜಿಲ್ಲೆ ಜಿಲ್ಲೆಯಲ್ಲಿ ತಿರುಗಿ, ವಿದ್ಯಾರ್ಥಿಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಜಾಗೃತಿ ಜಾಥಾ, ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಪರೂಪ. ಇಂತಹ ಬದ್ಧತೆಯನ್ನು ಪ್ರತಿಯೊಂದು ವಿವಿಗಳೂ ಪ್ರದರ್ಶಿಸಬೇಕು. ಸಮಾಜಮುಖಿಯಾಗಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಶಿವಲಿಂಗಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.