ಚಿತ್ರದುರ್ಗ: ಮದ್ಯ ನಿಷೇಧಕ್ಕೆ ಪಾದಯಾತ್ರೆ ಕೈಗೊಂಡಿದ್ದ ರೇಣುಕಮ್ಮ ಅಪಘಾತಕ್ಕೆ ಬಲಿಯಾದ ಬಳಿಕವಾದರೂ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಲ್ಲವಾದರೆ, ಬೀದಿಗೆ ಇಳಿದು ಮಹಿಳೆಯರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಹೋರಾಟಗಾರ್ತಿ ರೇಣುಕಮ್ಮಳ ಸಾವಿಗೆ ಯಾರು ಕಾರಣ ಎಂಬುದು ಯಕ್ಷ ಪ್ರಶ್ನೆ. ಸರ್ಕಾರದ ಪಾನಪ್ರಿಯತೆಯೇ ಅಥವಾ ದ್ವಿಚಕ್ರ ವಾಹನ ಸವಾರನೇ? ಮನೆ ಬಿಟ್ಟು, ಕೂಲಿ ತ್ಯಜಿಸಿ ಮದ್ಯ ನಿಷೇಧಕ್ಕೆ ಹೋರಾಟ ನಡೆಸುತ್ತಿರುವ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವುದಲ್ಲಿ ನಿರ್ಲಜ್ಜ ಸರ್ಕಾರ ವಿಫಲವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

* ಇದನ್ನೂ ಓದಿ:ಮದ್ಯನಿಷೇಧ ಆಂದೋಲನ: ಅಪಘಾತದಲ್ಲಿ ಮಹಿಳೆಸಾವು

‘ಕಾಲಿಗೆ ಚಪ್ಪಲಿ, ಹೊಟ್ಟೆ ತುಂಬ ಊಟವಿಲ್ಲದೇ ಚಿತ್ರದುರ್ಗದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ತುಮಕೂರು ತಲುಪಿದರೂ ಅವರ ಕಣ್ಣಲ್ಲಿ ಹೋರಾಟದ ಕಿಚ್ಚು ಆರಿರಲಿಲ್ಲ. ಎಲ್ಲವನ್ನೂ ಲಾಭಕೋರತನದಿಂದ ನೋಡುವ ರಾಜಕಾರಣಿಗಳು ಮಹಿಳೆಯರ ಹೋರಾಟಕ್ಕೆ ಸ್ಪಂದಿಸಿಲ್ಲ. ಇನ್ನೂ ಸಾವಿರಾರು ರೇಣುಕಮ್ಮಂದಿರು ಜನ್ಮ ತಾಳಬೇಕು. ಬೀದಿಗೆ ಇಳಿದು ಹೋರಾಟವನ್ನು ತೀವ್ರಗೊಳಿಸಬೇಕು’ ಎಂದು ಹೇಳಿದ್ದಾರೆ.

ಇವನ್ನೂ ಓದಿ
*‘ಶಕ್ತಿಕೇಂದ್ರ’ ಮುತ್ತಲಿರುವ ಮಹಿಳೆಯರು

*ಕುಡಿತದ ಕೊರಳ ಪಟ್ಟಿ ಹಿಡಿದು ನಡಿಗೆ

*ಮದ್ಯನಿಷೇಧ ಆಂದೋಲನ: ಅಪಘಾತದಲ್ಲಿ ಮಹಿಳೆಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.