ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಭವನಕ್ಕೆ ನಗರ ಪಾಲಿಕೆ ಆಡಳಿತ!

ಪಾಲಿಕೆ ವಿರೋಧ ಪಕ್ಷ ಆರೋಪ
Last Updated 6 ಡಿಸೆಂಬರ್ 2019, 12:13 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ಆಡಳಿತ ನಿಷ್ಕ್ರಿಯವಾಗಿದೆ. ಪಾಲಿಕೆತೆಗೆದುಕೊಳ್ಳಬೇಕಾದ ನಿರ್ಧಾರಗಳು ಜಿಲ್ಲಾಡಳಿತ ಭವನದಲ್ಲಿ ಇತ್ಯರ್ಥವಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆಎಂದುಪಾಲಿಕೆ ವಿರೋಧಪಕ್ಷ ಆರೋಪಿಸಿದೆ.

ಬಿಜೆಪಿ ಆಡಳಿತಚುಕ್ಕಾಣಿ ಹಿಡಿದು ವರ್ಷವಾಗಿದೆ. ಆಡಳಿತದಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಪ್ರಗತಿ ಪರಿಶೀಲನಾ ಸಭೆಗಳು, ಚರ್ಚೆಗಳುಜಿಲ್ಲಾಧಿಕಾರಿ ಕಚೇರಿಯಲ್ಲೇ ನಡೆಯುತ್ತಿವೆ. ನೆಪಮಾತ್ರಕ್ಕೆ ಪಾಲಿಕೆ ಇದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿದೂರಿದರು.

ಸರ್ಕಾರದ ಅನುದಾನ ಸಮರ್ಥವಾಗಿ ಬಳಕೆಯಾಗುತ್ತಿಲ್ಲ.ಈಗಅಧಿಕಾರವನ್ನೂಮೊಟಕು ಮಾಡಲಾಗುತ್ತಿದೆ.ಸ್ಮಾರ್ಟ್‌ಸಿಟಿ ನಿರ್ವಹಣೆಯೂ ವಿಫಲವಾಗಿದೆ.ಇಡೀ ನಗರದಲ್ಲಿಒಂದೇ ಒಂದು ಗುಂಡಿ ಮುಚ್ಚಲುಸಾಧ್ಯವಾಗಿಲ್ಲ.ಕಾಮಗಾರಿಗಳು ಕಳಪೆಯಾಗಿವೆ. ಕಂದಾಯ ವಿಭಾಗ ಸಂಪೂರ್ಣ ವಿಫಲವಾಗಿದೆ. ಖಾತೆ ವರ್ಗಾವಣೆಗೆ 3,500 ಕಡತಗಳುಬಾಕಿ ಇವೆ. ಕಟ್ಟಡ ಪರವಾನಗಿಸಮಸ್ಯೆಗಳೂಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುಮಾರು 162 ಟನ್ ಕಸ ಉತ್ಪಾದನೆಯಾಗುತ್ತಿದೆ. 130 ಟನ್ ವಿಲೇವಾರಿಯಾಗುತ್ತಿದೆ.ಪ್ರತಿದಿನ 32 ಟನ್ ಕಸ ನಗರದಲ್ಲೇ ಉಳಿಯುತ್ತಿದೆ. ಕಸ ಸಂಗ್ರಹಣೆ, ಸಾಗಣೆ,ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ.ಸ್ವಚ್ಛತಾ ಯೋಜನೆಯ₨22 ಕೋಟಿ ಬಂದಿದೆ. ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆ ಮನೆಗೆನೀಡಲು1.68 ಲಕ್ಷ ಕಸದ ಡಬ್ಬಿಗಳು, ಟಿಪ್ಪರ್ಗಳು,ಮೂರು ಚಕ್ರದ ವಾಹನಗಳು ಸೇರಿಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದರೂಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ ಎಂದು ದೂರಿದರು.

ಸದಸ್ಯರ ಅನುದಾನದ ಹಣವೂ ಬಳಕೆಯಾಗುತ್ತಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನವೂ ಸದ್ಬಳಕೆಯಾಗಿಲ್ಲ. ಸ್ಮಾರ್ಟ್‌ಸಿಟಿಗಾಗಿ 30 ಎಂಜಿನಿಯರ್‌ಗಳುಕೆಲಸ ಮಾಡುತ್ತಿದ್ದರೂ ರಸ್ತೆಗಳ ಗುಂಡಿ ಮುಚ್ಚಲು ಆಗಿಲ್ಲ.ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಲ್ಲಿ₨125 ಕೋಟಿ ಬಿಡುಗಡೆಯಾಗಿತ್ತು. ನೀರು ಪೂರೈಕೆ, ಒಳಚರಂಡಿ, ಬಾಕ್ಸ್ ಚರಂಡಿ, ರಸ್ತೆ ರಿಪೇರಿ, ವಿದ್ಯುತ್ ಅಳವಡಿಕೆ ಕೆಲಸಗಳು ಕುಂಠಿತವಾಗಿವೆ ಎಂದು ಆರೋಪಿಸಿದರು.

ಪೌರ ಕಾರ್ಮಿಕರಿಗೆ ನವುಲೆ ಬಳಿ ಜಿ+2 ನಿವೇಶನ ನಿರ್ಮಿಸಲುಆಗಿಲ್ಲ. ಪಾಲಿಕೆಯ ಹುದ್ದೆಗಲೂಖಾಲಿ ಇವೆ.438 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 1,163 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲೆಯವರೇ ಮುಖ್ಯಮಂತ್ರಿ, ಸಚಿವರೂ ಇದ್ದಾರೆ. ಯಾರಿಗೂ ಪಾಲಿಕೆಬೇಡವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಎಚ್‌.ಸಿ.ಯೋಗೀಶ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೋಹತ್ ಶರೀಫ್, ಮಾಜಿ ಸದಸ್ಯ ಪಂಡಿತ್ ವಿ. ವಿಶ್ವನಾಥ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT