ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ, ನಾಗರಿಕರ ಮಧ್ಯೆ ಸೇತುವೆ ‘ಕೊರೊನಾ ವಾರಿಯರ್ಸ್‌’

Last Updated 31 ಮಾರ್ಚ್ 2020, 12:39 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾಡಳಿತ ಮತ್ತು ಜಿಲ್ಲೆಯ ನಾಗರಿಕರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಕೊರೊನಾ ವಾರಿಯರ್ಸ್‌ ಪಡೆ ಸಜ್ಜಾಗಿದೆ.

ರೆಡ್‍ಕ್ರಾಸ್ ಸಂಸ್ಥೆ, ವಾರ್ತಾ ಇಲಾಖೆ,ಕಾರ್ಮಿಕ ಸಂಘಗಳ ಸಹಯೋಗದಲ್ಲಿಆಸಕ್ತ 200 ಯುವಕರನ್ನುಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ.ಜಿಲ್ಲೆಯಲ್ಲಿ ಕೊರೊನಾ ಹರಡಂತೆ ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಈ ಪಡೆ ಸಂಪೂರ್ಣ ಸಹಕಾರ ನೀಡಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವುದು,ನಿರ್ಬಂಧದಪರಿಣಾಮ ಸಂಕಷ್ಟಕ್ಕೆ ಸಿಲುಕಿರುವವರ ಮನೆ ಬಾಗಿಲಿಗೆ ಆಹಾರ, ಪಡಿತರ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವುದು. ವೈರಸ್‌ ತಡೆಗೆ ಬಹುಮುಖ್ಯ ನಡೆಯಾದಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರಿಗೆ ಅಗತ್ಯ ಸೂಚನೆಗಳನ್ನು ನೀಡುವುದು. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಆಶ್ರಯ ಒದಗಿಸುವ ಕಾರ್ಯವನ್ನು ಈ ಪಡೆ ನಿರ್ವಹಿಸಲಿದೆ. ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಲಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುವಸುಳ್ಳು ಸುದ್ದಿಗಳು, ಅನಧಿಕೃತಸಂದೇಶಗಳ ಮೇಲೂ ಈ ಪಡೆ ನಿಗಾ ಇಡಲಿದೆ. ಸ್ವಯಂ ಸೇವಕರಿಗೆ ಸರ್ಕಾರದ ಗುರುತಿನ ಪತ್ರಸಹ ನೀಡಿದೆ. ಪತ್ರ ದುರುಪಯೋಗ ಪಡಿಸಿಕೊಳ್ಳಬಾರದು. ಯಾರಾದರೂ ವೈಯಕ್ತಿಕ ಹಿತಾಸಕ್ತಿ ಕಾರಣಕ್ಕೆ ದುರುಪಯೋಗ ಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಸ್ವಯಂ ಸೇವಾ ಕಾರ್ಯಗಳಿಗಷ್ಟೆ ಗುರುತಿನ ಚೀಟಿ ಬಳಕೆ ಮಾಡಬೇಕು ಎಂದುಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT