ಮಂಗಳವಾರ, ಜೂನ್ 15, 2021
23 °C

ಮಂಗಳೂರು: 11 ಕಂಟೈನ್‌ಮೆಂಟ್ ವಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ ಮತ್ತೆ 1,513 ಮಂದಿಗೆ ಕೋವಿಡ್ ದೃಢವಾಗಿದೆ. ಈ ಮಧ್ಯೆ ಮೃತಪಟ್ಟ ಮೂವರಿಗೆ ಕೋವಿಡ್–19 ಇರುವುದು ಶನಿವಾರ ಖಚಿತವಾಗಿದೆ.

ಶನಿವಾರ ಜಿಲ್ಲೆಯಲ್ಲಿ 11 ಕಂಟೈನ್‌ಮೆಂಟ್ ವಲಯ ಗುರುತಿಸಲಾಗಿದೆ. ಪುಳಿಂಚಾರ್ ಅಳಿಕೆಯ ಮನೆಯೊಂದರಲ್ಲಿ ಏಳು ಜನರು, ಅಂಗಾರಗುಡ್ಡೆ ಶಿಮಂತೂರು ರಾಯರ ಮನೆ ಸಮೀಪ ಆರು ಪ್ರಕರಣ, ಅಮಟೂರು ಬಂಟ್ವಾಳದಲ್ಲಿ ಆರು ಪ್ರಕರಣ, ಅಲ್ಲಿಯೇ ಸಮೀಪದ ಸಂಚಯಗಿರಿ ಮನೆಯಲ್ಲಿ ಆರು ಪ್ರಕರಣ, ಮುಡ್ಜಾಲು ಬೆಳ್ತಂಗಡಿಯಲ್ಲಿ ಆರು ಪ್ರಕರಣ, ಶಿರ್ಲಾಲು ಪಂಚಾಯಿತಿಯಲ್ಲಿ ಒಂಬತ್ತು ಪ್ರಕರಣ, ಬಿ.ಸಿ.ರೋಡಿನಲ್ಲಿ ಐದು ಪ್ರಕರಣ, ಸೋಮೇಶ್ವರ ಅಲಿ ಕಾಂಪೌಂಡ್‌ನಲ್ಲಿ ಆರು ಪ್ರಕರಣ, ದೇರಳಕಟ್ಟೆ ಶಾಂತಿಧಾಮದಲ್ಲಿ ಆರು ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ.

ಕಾಸರಗೋಡು: 1,749 ಪ್ರಕರಣ

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 1,749 ಮಂದಿಗೆ ಕೋವಿಡ್–19 ದೃಢವಾಗಿದ್ದು, 621 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 15,599 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಇದುವರೆಗೆ 55,032 ಮಂದಿಗೆ ಸೋಂಕು ದೃಢಪಟ್ಟಿದ್ದು, 39,925 ಮಂದಿ ಗುಣಮುಖರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು