ಶುಕ್ರವಾರ, ಆಗಸ್ಟ್ 12, 2022
27 °C

40 ಕೆ.ಜಿ ಗಾಂಜಾ ಪತ್ತೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ₹ 20 ಲಕ್ಷ ಮೌಲ್ಯದ 40 ಕೆ.ಜಿ ಗಾಂಜಾ ಹಾಗೂ ಆರೋಪಿ ಅಹಮ್ಮದ್ ಸಾಬಿತ್ ಎಂಬ ಯುವಕನನ್ನು ಮಂಗಳವಾರ ನಗರ ಠಾಣೆಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಅವಿನಾಶ್ ಗೌಡ ನೇತೖತ್ವದ ಪೊಲೀಸ್‌ ತಂಡವು ದಾಳಿ ಮಾಡಿ ಬಂಧಿಸಿದೆ.

 ಇದೇ ವೇಳೆ ಮನೆಯಲ್ಲಿದ್ದ ಈತನ ಸಂಬಂಧಿ ಮಹಮ್ಮದ್ ಅನ್ಸಾರ್‌ ಪರಾರಿಯಾಗಿದ್ದಾನೆ. 

ಆಂಧ್ರಪ್ರದೇಶ, ವಿಶಾಖಪಣ್ಣಂ ಮತ್ತಿತರ ಕಡೆಗಳಿಗೆ ಮೀನು ಸಾಗಣೆ ಮಾಡುತ್ತಿದ್ದು, ಮರಳಿ ಬರುವಾಗ ಮಾರಾಟ ಮಾಡಲು ಗಾಂಜಾ ತರುತ್ತಿದ್ದೆವು ಎಂದು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮನೆಯಲ್ಲಿ ಎರಡು ಬಿಳಿ ಬಣ್ಣದ ಪಾಲಿಥಿನ್ ಚೀಲಗಳಲ್ಲಿ ಖಾಕಿ ಬಣ್ಣದ ಪ್ಲಾಸ್ಟಿಕ್‌ನಲ್ಲಿ 10 ಕಟ್ಟುಗಳಲ್ಲಿ ಮಾದಕ ಗಾಂಜಾ ಗಿಡದ ಮೊಗ್ಗು, ಎಲೆ, ಕಡ್ಡಿ ಪತ್ತೆಯಾಗಿವೆ.

ಡಿವೈಎಸ್ಪಿ ವೆಲೆಂಟೈನ್‌ ಡಿಸೋಜ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್ ಮತ್ತು ಪಿಎಸ್‌ಐ ಅವಿನಾಶ್ ಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.