ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲ ಬಟ್ಟಪ್ಪಾಡಿಯ ಗೆಸ್ಟ್ ಹೌಸ್ ನಲ್ಲಿ ಬೆಂಗಳೂರಿನಿಂದ ಬಂದ ತಂಡಗಳ ನಡುವೆ ಶನಿವಾರ ರಾತ್ರಿ ಹೊಡೆದಾಟ ನಡೆದಿದೆ. ಹೊಡೆದಾಟದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಕೆಲವರು ಸ್ಥಳೀಯ ಮನೆಗಳಿಗೆ ನುಗ್ಗಿ ತೊಂದರೆ ನೀಡಿದ್ದಾರೆ ಎಂದು ಅರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಗೆಸ್ಡ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿತ್ತು. ಎರಡು ಬಸ್ ಗಳಲ್ಲಿ ಬಂದಿದ್ದವರು ತಡರಾತ್ರಿವರೆಗೆ ಪಾರ್ಟಿ ನಡೆಸಿದ್ದರು. ಈ ವೇಳೆ ತಂಡಗಳ ನಡುವೆ ಜಗಳ ನಡೆದಿದೆ. ಹೊಡೆದಾಡಿಕೊಳ್ಳುತ್ತಿದ್ದವರು ಗೆಸ್ಟ್ ಹೌಸ್ ನ ಹೊರಗಡೆ ಬಂದು ರಸ್ತೆ ಬದಿಯಲ್ಲಿ ಜಗಳ ಮುಂದುವರಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದವರು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಸ್ಥಳೀಯರು ಅಪಾದಿಸಿದ್ದಾರೆ. ಬಳಿಕ ಸ್ಥಳೀಯರು

ಒಟ್ಟು ಸೇರಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೇ ಧಾವಿಸುತ್ತಿದ್ದಂತೆ ಬೆಂಗಳೂರಿನಿಂದ ಬಂದವರು ಪರಾರಿಯಾಗಿದ್ದಾರೆ. ಸ್ಥಳೀಯರು ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.