ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಡ್ ನೇರ್ಚೆ, ಧಾರ್ಮಿಕ ಪ್ರವಚನ

Last Updated 29 ಜೂನ್ 2022, 13:46 IST
ಅಕ್ಷರ ಗಾತ್ರ

ಮಂಗಳೂರು: ಅಶ್ಯೆಖ್ ಅಸ್ಸೆಯ್ಯಿದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್‌ಬುಖಾರಿ ಅವರ 96ನೇ ಆಂಡ್ ನೇರ್ಚೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ಉಸ್ತಾದ್ ಅವರ ನೇತೃತ್ವದಲ್ಲಿ ಈಚೆಗೆ ನಡೆಯಿತು.

ಕೂಟು ಝಿಯಾರತ್, ಖತಮುಲ್ ಖುರ್‌ಆನ್‌ ಹಾಗೂ ಸಿಲ್‌ಸಿಲಾ ಪಾರಾಯಣ ಒಳಗೊಂಡ ಕಾರ್ಯಕ್ರಮದಲ್ಲಿ ಮಸೀದಿ ಖತೀಬ್‌ ಅಲ್‌ಹಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಶಾ ತಂಙಳ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹಾಜಿ ಎಸ್‌.ಎಂ.ರಶೀದ್, ಅಬ್ದುಲ್ ಸಮದ್ ಹಾಜಿ, ಐ.ಮೊಯಿದ್ದಿನಬ್ಬ ಹಾಜಿ, ಅದ್ದು ಹಾಜಿ, ಅಶ್ರಫ್ ಹಳೆಮನೆ ಇದ್ದರು.

ಬದ್ರಿಯಾ ಜುಮಾ ಮಸೀದಿ ಖತೀಬ್ ಶೇಖಬ್ಬ ಬಾಖವಿ ಉಸ್ತಾದ್, ನಡುಪಳ್ಳಿ ಜುಮಾ ಮಸೀದಿ ಖತೀಬ್ ರಿಯಾಝ್ ಫೈಝಿ, ಮೊಯ್ದೀನ್ ಜುಮಾ ಮಸೀದಿ ಖತೀಬ್‌ ಮೊಹಮ್ಮದ್ ಬಾಖವಿ, ಅಝರಿಯ ಮುದರಿಸ್‌ ಹೈದರ್ ಮದನಿ, ಸಹಾಯಕ ಮುದರಸ್‌ ಅಬೂಬಕ್ಕರ್ ಮದನಿ ಅವರು ಕೂಡ ಪಾಲ್ಗೊಂಡಿದ್ದರು.

ಮೂರು ದಿನ ಧಾರ್ಮಿಕ ಪ್ರವಚನ ಮತ್ತು ಅನ್ನದಾನವನ್ನೂ ಆಯೋಜಿಸಲಾಗಿತ್ತು ಎಂದು ಮಂಗಳೂರು ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾ‌ನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT