ಮಂಗಳೂರು: ಯುದ್ಧವಿಮಾನಗಳು, ತರಬೇತಿ ವಿಮಾನಗಳು, ಡ್ರೋನ್ಗಳು ಇತ್ಯಾದಿ ಲೋಹದ ಹಕ್ಕಿಗಳ ಮಾದರಿ ಅಡ್ಯಾರ್ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶನಿವಾರ ಗಮನ ಸೆಳೆದವು.

ಶೈನ್ ಫೌಂಡೇಷನ್ ಸಹಯೋಗದಲ್ಲಿ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಆಯೋಜಿಸಿದ್ದ ಸೃಜನಶೀಲ ನವೋದ್ಯಮ ಮೇಳ ‘ಸಿನರ್ಜಿಯ’ದ ಕೊನೆಯ ದಿನ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ‘ಏರ್ ಷೋ’ದಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ ಅನಾವರಣಗೊಂಡಿತು.

ಆತಿಥೇಯ ಕಾಲೇಜಿನ ‘ಚಾಲೆಂಜರ್ಸ್’ ತಂಡ ಮತ್ತು ಬೆಂಗಳೂರಿನ ಆದಿತ್ಯ ಪವಾರ್ ಮತ್ತು ಅಭಯ್ ಪವಾರ್ ಸಿದ್ಧಪಡಿಸಿದ್ದ ವಿಮಾನದ ಮಾದರಿಗಳು ವಿಭಿನ್ನ ಭಂಗಿಯಲ್ಲಿ ಹಾರಾಡಿದಾಗ ಸುತ್ತ ಸೇರಿದ್ದ ವಿದ್ಯಾರ್ಥಿಗಳು ಮತ್ತು ಆಸಕ್ತರು ಮುದಗೊಂಡರು. ಅಮೆರಿಕದ ಎಫ್ 22 ರ್ಯಾಪ್ಟರ್ನ ಸ್ಕೇಲ್ಡ್ ಡೌನ್ ಆವೃತ್ತಿ, ಇಲೆಕ್ಟ್ರಿಕ್ 3ಡಿ ಪ್ಲೇನ್ ಮಾದರಿ, 120ಸಿಸಿ ಸ್ಲಿಕ್ ಪ್ಲೇನ್ ಮುಂತಾದವುಗಳ ಮಾದರಿಗಳು ಬಾನಾಡಿಗಳಂತೆ ಹಾರಿ ರೋಮಾಂಚಕಾರಿ ಅನುಭವ ನೀಡಿದವು.

ಆದಿತ್ಯ ಪವಾರ್ ಅವರ ಇಲೆಕ್ಟ್ರಿಕ್ 3ಡಿ ಪ್ಲೇನ್ಗಳು ಮೊದಲು ಹಾರಾಟದ ಆವರಣಕ್ಕೆ ಲಗ್ಗೆ ಇರಿಸಿತು. ನಂತರ ಪ್ಯಾನರ್ ಕಾಣಿಸಿಕೊಂಡಿತು. ಇದರ ಬೆನ್ನಲ್ಲೇ ಚಾಲೆಂಜರ್ಸ್ ತಂಡದ ಡ್ರೋನ್ಗಳು ಹಾರಿ ಬಂದವು. ಅದರ ಪ್ರದರ್ಶನ ಮುಗಿದ ಕೂಡಲೇ ಎಫ್ 22 ರ್ಯಾಪ್ಟರ್ ಮಾದರಿ ಬರುತ್ತಿದ್ದಂತೆ ನೋಡುಗರ ಉದ್ಘಾರ ಕೇಳಿಬಂತು. ಎಫ್ಪಿವಿ (ಫಸ್ಟ್ ಪರ್ಸನ್ ವ್ಯೂ) ಡ್ರೋನ್, ಪ್ರಬಲ ಎಂಜಿನ್ ಶಕ್ತಿ ಹೊಂದಿರುವ 170 ಸಿಸಿ ಕಾರ್ಬನ್ ಕಬ್ ಬೆನ್ನಲ್ಲೇ ಎರಡು ಎಫ್ಪಿವಿಗಳು ಹಾರಾಡಿದವು.

ಕಾಲೇಜಿನ ಪ್ರಾಂಶುಪಾಲ ಎಸ್.ಎಸ್ ಇಂಜಗನೇರಿ, ಉಪಪ್ರಾಂಶಪಾಲ ಸುಧೀರ್ ಶೆಟ್ಟಿ, ಡೀನ್ ಶಮಂತ್ ರೈ, ವಿದ್ಯಾರ್ಥಿ ಪ್ರತಿನಿಧಿಗಳಾದ ಜೀವಿತಾ ಜೆ.ಎಸ್, ವೈಭವ್, ಅನಿಕಾ, ಜೀವನ್, ಪ್ರಜೋತ್, ಅಮೋಘ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.