ಭಾನುವಾರ, ಸೆಪ್ಟೆಂಬರ್ 25, 2022
21 °C
ಹೈಸ್ಕೂಲ್ ವಿಭಾಗದಲ್ಲಿ ಪ್ರೆಸ್ಟೀಜ್ ಅಂತಿಮ ಹಂತಕ್ಕೆ

ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್‌ ಟೂರ್ನಿ: ಅಲೋಶಿಯಸ್‌, ಯೆನೆಪೋಯ ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರೋಚಕ ಟೈಬ್ರೇಕರ್‌ನಲ್ಲಿ ಕೊನೆಗೊಂಡ ಪಂದ್ಯದಲ್ಲಿ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಮಿಲಾಗ್ರಿಸ್ ಪಿಯು ಕಾಲೇಜು ತಂಡವನ್ನು ಮಣಿಸಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ನಗರದ ನೆಹರು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಯೆನೆಪೋಯ ಕಾಲೇಜು ತಂಡ ಅಲ್‌ಫುರ್ಖಾನ್ ತಂಡವನ್ನು 4–0ಯಿಂದ ಮಣಿಸಿತು. ಪದವಿ ವಿಭಾಗದ ಫೈನಲ್‌ನಲ್ಲಿ ಯೆನೆಪೋಯ ತಂಡ ಸೇಂಟ್ ಫಿಲೋಮಿನಾ ತಂಡವನ್ನು ಎದುರಿಸಲಿದೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಯೆನೆಪೋಯ 2–1ರಲ್ಲಿ ಸೇಂಟ್ ಅಲೋಶಿಯಸ್ ತಂಡವನ್ನು ಮತ್ತು ಸೇಂಟ್ ಫಿಲೋಮಿನಾ ಟೈಬ್ರೇಕರ್‌ನಲ್ಲಿ ಯೆನೆಪೋಯದ ಮತ್ತೊಂದು ತಂಡವನ್ನು ಮಣಿಸಿತು.

ಹೈಸ್ಕೂಲ್ ವಿಭಾಗದಲ್ಲಿ ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸ್ಕೂಲ್ ಟೈಬ್ರೇಕರ್‌ನಲ್ಲಿ (5–4) ಸೇಂಟ್ ಅಲೋಶಿಯಸ್ ತಂಡವನ್ನು ಮತ್ತು ಯೆನೆಪೋಯ 5–0ಯಿಂದ ಫಲಾ ಶಾಲಾ ತಂಡವನ್ನು ಸೋಲಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು