ಮಂಗಳೂರು: ‘ಆಳ್ವಾಸ್ ಪ್ರಗತಿ’ 15ನೇ ಆವೃತ್ತಿಯ ಉದ್ಯೋಗ ಮೇಳದಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 285 ಕಂಪನಿಗಳು ನೋಂದಣಿ ಮಾಡಿಕೊಂಡಿವೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಆಳ್ವಾಸ್ ಉದ್ಯೋಗ ಮೇಳಗಳ ಮೂಲಕ ಈವರೆಗೆ 36,151 ಉದ್ಯೋಗಗಳನ್ನು ನೀಡಲಾಗಿದೆ. ಈ ಬಾರಿಯ ಮೇಳ ಆಗಸ್ಟ್ 1 ಮತ್ತು 2ರಂದು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯಲಿದೆ. ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಇತರ ಕೋರ್ಸ್ಗಳನ್ನು 2025ರ ಪೂರ್ವದಲ್ಲಿ ಪೂರ್ಣಗೊಳಿಸುವವರು ಮೇಳದಲ್ಲಿ ಭಾಗವಹಿಸಬಹುದು’ ಎಂದರು.

ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ 70 ಕಂಪನಿಗಳು, 200 ಉದ್ಯೋಗಾವಕಾಶಗಳು, ಬಿ.ಕಾಂ ಪದವೀಧರರಿಗೆ 150 ಉದ್ಯೋಗಾವಕಾಶ, ಐಟಿಐ 1,000, ಐಟಿಇಎಸ್ ವಲಯದಲ್ಲಿ 3,000ಕ್ಕೂ ಅಧಿಕ ಉದ್ಯೋಗ, ಬಿ.ಇ, ಬಿ.ಟೆಕ್ 1,000 ಉದ್ಯೋಗಾವಕಾಶ, ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದಲ್ಲಿ 30 ಕಂಪನಿಗಳಿಂದ 2,500ಕ್ಕೂ ಅಧಿಕ, ಎಂಬಿಎ, ಎಂ.ಕಾಂ ವಿದ್ಯಾರ್ಥಿಗಳಿಗೆ 500ಕ್ಕೂ ಹೆಚ್ಚು, ನರ್ಸಿಂಗ್ ವಲಯದಲ್ಲ 700ಕ್ಕೂ ಅಧಿಕ, ಫಾರ್ಮಾ ವಲಯದಲ್ಲಿ 250ರಷ್ಟು, ಮಾಧ್ಯಮ ವಲಯದಲ್ಲಿ 180ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.

ಮಾರಾಟ ಮತ್ತು ಚಿಲ್ಲರೆ ವಲಯದಲ್ಲಿ 59 ಕಂಪನಿಗಳಿಂದ 4,500 ಉದ್ಯೋಗಾವಕಾಶ ಲಭ್ಯ ಇವೆ. ನಿರ್ಮಾಣ ವಲಯದಲ್ಲಿ 400ಕ್ಕೂ ಹೆಚ್ಚು, ಆತಿಥ್ಯ ವಲಯದಲ್ಲಿ 250ರಷ್ಟು ಉದ್ಯೋಗದ ಅವಕಾಶಗಳು ತೆರೆದಿವೆ. ಮೇಳದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನೋಂದಣಿ ಮಾಡಬೇಕು. ನೋಂದಣಿ ಉಚಿತವಾಗಿದೆ ಎಂದು ತಿಳಿಸಿದರು. ಮಾಹಿತಿಗೆ ಸಂಪರ್ಕ ಸಂಖ್ಯೆ: 9611750531.

ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ತರಬೇತಿ ಮತ್ತು ನಿಯೋಜನೆ ಮುಖ್ಯಸ್ಥೆ ರಂಜಿತಾ ಆಚಾರ್ಯ, ಅಮಿತ್ ಶೆಟ್ಟಿ ಇದ್ದರು.

ಮೇಳದ ಉದ್ಘಾಟನೆ

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆ.1ರಂದು ಬೆಳಿಗ್ಗೆ 9.30ಕ್ಕೆ ಮೇಳ ಉದ್ಘಾಟಿಸುವರು. ವಿವಿಧ ಕ್ಷೇತ್ರಗಳ ಪ್ರಮುಖರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಕೆ.ಎಸ್. ಶೇಖ್ ಕರ್ನಿರೆ ರವೀಶ್ ಕಾಮತ್ ರೋಹನ್ ಮೊಂತೆರೊ ಸುಯೋಗ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ. ಮೇಳದಲ್ಲಿ ಭಾಗವಹಿಸುವ ಪ್ರಮುಖ ಕಂಪನಿಗಳು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಬುಹಲೇರ್ ಇಂಡಿಯಾ' ವೋಲ್ವೊ ಗ್ರೂಪ್ ಇಂಡಿಯಾ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಭವಾನಿ ಶಿಪ್ಪಿಂಗ್ ಫ್ಲಿಪ್ಕಾರ್ಟ್ ಇನ್ಫೋಸಿಸ್ ಬಿಪಿಎಂ ಅಮೆಝಾನ್ ಒರಾಕಲ್ ಎಎನ್ಝಡ್ ಎಚ್ಡಿಎಫ್ಸಿ ಬ್ಯಾಂಕ್ ಕೋಟಕ್ ಮಹೀಂದ್ರಾ ಆ್ಯಕ್ಸಿಸ್ ಬ್ಯಾಂಕ್ ನಾರಾಯಣ ಹೃದಯಾಲಯ ವೊಕಾರ್ಡ್ಟ್ ಮುಂಬೈ ಇಂದಿರಾ ಹಾಸ್ಪಿಟಲ್ ಮುಂಬೈ ಮತ್ತು ಬೆಂಗಳೂರು ಸಿಪ್ಲಾ ಮೆಡಿಟೆಕ್ ಇಂಡಿಯಾ ಬಿಗ್ ಬಾಸ್ಕೆಟ್ ಕೋಡ್ಯಂಗ್ ರಿಲಯನ್ಸ್ ರಿಟೇಲ್ ರಾಮೇಶ್ವರಂ ಕೆಫೆ ತಾಜ್ ಸ್ಯಾಟ್ಸ್ ಏರ್ ಕ್ಯಾಟರಿಂಗ್ ಗೋಲ್ಡ್ಫಿಂಚ್ ಹೋಟೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.