ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಯುಷ್ ಆಸ್ಪತ್ರೆಯಲ್ಲಿ ಮಾತ್ರೆ ಕೊರತೆ: ವೇದವ್ಯಾಸ ಕಾಮತ್ ಆರೋಪ

Published : 13 ಆಗಸ್ಟ್ 2024, 4:37 IST
Last Updated : 13 ಆಗಸ್ಟ್ 2024, 4:37 IST
ಫಾಲೋ ಮಾಡಿ
Comments

ಮಂಗಳೂರು: ‘ಲಾಲ್‌ಬಾಗ್ ಹ್ಯಾಟ್ ಹಿಲ್‌ನಲ್ಲಿರುವ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಯಲ್ಲಿ ಕೆಲ ಮಾತ್ರೆಗಳು ಲಭ್ಯವಿಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

‘ಆಸ್ಪತ್ರೆಯ ವೈದ್ಯರೇ ಬರೆದುಕೊಡುವ ಕೆಲವು ಮಾತ್ರೆಗಳೂ ಅಲ್ಲಿ ಲಭ್ಯವಿಲ್ಲ. ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲೂ ಕೆಲವೇ ಮಾತ್ರೆಗಳು ಲಭ್ಯ ಇವೆ. ರೋಗಿಗಳು ಮಾತ್ರೆಗಳಿಗಾಗಿ ದಿನವಿಡೀ ಸುತ್ತಬೇಕಾಗಿ ಬಂದಿದೆ. ಒಂದು ವರ್ಷದಿಂದ ಸಮಸ್ಯೆ ಹೆಚ್ಚಾಗಿದೆ. ಆದರೂ ಆಯುಷ್ ಇಲಾಖೆ ಗಮನ ಹರಿಸಿಲ್ಲ’ ಎಂದು ಅವರು ದೂರಿದ್ದಾರೆ. 

‘ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ವರದಿಯನ್ನು ಆಯುಷ್ ಇಲಾಖೆಯು ರೋಗಿಗಳಿಗೆ ನೀಡುತ್ತಿಲ್ಲ. ಪ್ರಶ್ನಿಸಿದರೆ, ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳಿ. ಮುದ್ರಿಸಲು ನಮ್ಮಲ್ಲಿ ಪೇಪರ್ ಇಲ್ಲ ಎಂದು ಹೇಳುತ್ತಾರೆ ಎಂದು ಜನ ದೂರುತ್ತಿದ್ದಾರೆ. ಆರೋಗ್ಯ ಸಚಿವ  ದಿನೇಶ್ ಗುಂಡೂರಾವ್   ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲಿಯೇ ಹೀಗಾದರೆ ಇನ್ನು ಬೇರೆ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದು’ ಎಂದು ಅವರು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT