ಬಹರೇನ್: ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸಂದರ್ಭದಲ್ಲಿ ಬಹರೇನ್ನಲ್ಲಿ ಉಂಟಾಗಿದ್ದ ಉದ್ವಿಗ್ನತೆ ಪರಿಸ್ಥಿತಿಯ ಕುರಿತು ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಹಬೀಬ್ ಉಪ್ಪಿನಂಗಡಿ ಅವರು ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

'ನಮ್ಮ ಭಾಗದಲ್ಲಿ ರಾತ್ರಿಯ ವೇಳೆ ಕ್ಷಿಪಣಿ ಮತ್ತು ಡ್ರೋನ್ಗಳ ಶಬ್ದ ಪದೇ ಪದೇ ಕೇಳಿಬರುತ್ತಿತ್ತು. ಆಕಾಶದಲ್ಲಿ ವೈರಿಗಳ ಕ್ಷಿಪಣಿಗಳನ್ನು ಇಲ್ಲಿನ ರಕ್ಷಣಾ ಪಡೆಗಳು ಹೊಡೆದುರುಳಿಸುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ದಾಳಿ ನಡೆಯುತ್ತದೆ ಎಂಬ ಸೂಚನೆ ಬಂದಾಗ ನಮ್ಮ ಮೊಬೈಲ್ ಫೋನ್ಗಳಿಗೆ ಸಂದೇಶ ಬರುತ್ತಿದ್ದವು. ಕೆಲವು ಬಾರಿ ಸ್ಫೋಟದ ಶಬ್ದ ಮತ್ತು ಸೈರನ್ ಕೇಳಿಬರುತ್ತಿತ್ತು' ಎಂದು ಹಬೀಬ್ ಹೇಳಿದ್ದಾರೆ.

ಬಹರೇನ್ನ ಮನಾಮ ಮತ್ತು ಜುಫೈರ್ ಭಾಗದಲ್ಲಿ ಜನಜೀವನ ತಾತ್ಕಾಲಿಕವಾಗಿ ಸ್ತಬ್ಧಗೊಂಡಿದ್ದರೂ, ಯಾವುದೇ ರೀತಿಯ ಆತಂಕ ಸೃಷ್ಟಿಯಾಗಿಲ್ಲ. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಸುರಕ್ಷತೆಯ ದೃಷ್ಟಿಯಿಂದ ವಿಶ್ವವಿದ್ಯಾಲಯಗಳು ಮತ್ತು ಕಚೇರಿಗಳು ಆನ್ಲೈನ್ ಮೂಲಕ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಸೂಚಿಸಿದ್ದರು. ಬಹ್ರೇನ್ನಲ್ಲಿರುವ ಅಮೆರಿಕದ ಮಿಲಿಟರಿ ಕಚೇರಿ, ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿದೆ. ಹೀಗಾಗಿ ಜನವಸತಿ ಪ್ರದೇಶಗಳಲ್ಲಿ ಹೆಚ್ಚಿನ ಭಯವಿರಲಿಲ್ಲ ಎಂದೂ ಅವರು ವಿವರಿಸಿದ್ದಾರೆ.

ಬಹರೇನ್ನ ರಕ್ಷಣಾ ಪಡೆಗಳು ದಾಳಿಗಳನ್ನು ಯಶಸ್ವಿಯಾಗಿ ತಡೆದಿದೆ. ಕ್ಷಿಪಣಿಗಳನ್ನು ಹೊಡೆದುರುಳಿಸುವ ವೇಳೆ ಬಿದ್ದ ಅವಶೇಷಗಳಿಂದ ಸಣ್ಣಪುಟ್ಟ ಹಾನಿಯಾಗಿದೆಯೇ ಹೊರತು ಯಾವುದೇ ನಾಗರಿಕರಿಗೆ ಸಾವು-ನೋವು ಸಂಭವಿಸಿಲ್ಲ. ಅಧಿಕಾರಿಗಳು, ಜನರಿಗೆ ನಿರಂತರವಾಗಿ ಮಾರ್ಗಸೂಚಿಗಳನ್ನು ನೀಡುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹಬೀಬ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.