ಮಂಗಳೂರು: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು, ಶ್ರೀರಾಮಕೃಷ್ಣ ಮಠ ಮಂಗಳಾದೇವಿ, ಬಹುವಚನಂ ಪುತ್ತೂರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಸೆ. 21ರಂದು ಬೆಳಿಗ್ಗೆ 10ರಿಂದ ಶ್ರೀರಾಮಕೃಷ್ಣ ಮಠದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪುತ್ತೂರಿನ ಬಹುವಚನಂ ಸಂಸ್ಥೆಯ ಸಂಚಾಲಕ ಶ್ರೀಶ ಕುಮಾರ್, ‘ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸ ಆಚಾರ್ಯ ಶ್ರೀಶಾನಂದ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೋತಿಷಿ ಪಾವಂಜೆ ವಾಸುದೇವ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಾಥ ಎಂ.ಪಿ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸುವರು. ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಸಿ.ಎ. ರಾಘವೇಂದ್ರ ರಾವ್ ಅವರಿಗೆ ಬನ್ನಂಜೆ ಗೌರವ ಸನ್ಮಾನ ನೀಡಲಾಗುವುದು ಎಂದರು.

ಮಧ್ಯಹ್ನ 12ಕ್ಕೆ ‘ಬನ್ನಂಜೆಯವರ ಅನುವಾದ ಸಂದರ್ಯ’ ಗೋಷ್ಠಿಯನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ನಡೆಸಿಕೊಡುವರು. ‘ಬನ್ನಂಜೆಯವರು ಸ್ತ್ರೀಯರಿಗೆ ಕೊಟ್ಟ ಧೈರ್ಯ’ ಗೋಷ್ಠಿಯನ್ನು ಉಪನ್ಯಾಸಕಿ ಅಕ್ಷಯಾ ಗೋಖಲೆ ನಡೆಸಿಕೊಡುವರು. ಬನ್ನಂಜೆ ಅವರ ಸಹಪಾಠಿ ವಿ.ಕೆ. ಲಕ್ಷ್ಮೀನಾರಾಯಣ ಆಚಾರ್ಯ ಕಾರಿಂಜ ಉಪಸ್ಥಿತರಿರುವರು ಎಂದು ಹೇಳಿದರು.

ಮಧ್ಯಾಹ್ನ 2ರಿಂದ 2ನೇ ಗೋಷ್ಠಿ ನಡೆಯಲಿದ್ದು, ‘ಬನ್ನಂಜೆಯವರು ಕಂಡ ಸ್ತ್ರೀ ಪಾತ್ರಗಳು’ ಗೋಷ್ಠಿಯನ್ನು ವಿಭು ಅಕಾಡೆಮಿ ಅಧ್ಯಕ್ಷೆ ವಿ.ಬಿ. ಆರತಿ ನಡೆಸಿಕೊಡುವರು. ವಿದ್ವಾಂಸ ವಿಜಯ ಸಿಂಹ ಆಚಾರ್ಯ ಅವರು ‘ಯುವಕ ಬನ್ನಂಜೆ’ ಗೋಷ್ಠಿ, ಸಂಸ್ಕೃತ ಭಾರತಿ ಕಾರ್ಯಕರ್ತ ಎಚ್.ಆರ್. ವಿಶ್ವಾಸ್ ‘ಬನ್ನಂಜೆಯೆಂಬ ಬಲ್ಲಿದನ ಬೆನ್ನು ಹಿಡಿದು’ ಗೋಷ್ಠಿ ನಡೆಸಿಕೊಡುವರು. ವಿದ್ವಾಂಸ ಎಂ. ಪ್ರಭಾಕರ ಜೋಶಿ ‘ಮಂಗಳೂರಿನಲ್ಲಿ ಬೆಳೆದು ಬಂದ ಆಚಾರ್ಯರು’ ಗೋಷ್ಠಿ ನಡೆಸಿಕೊಡುವರು. ಬನ್ನಂಜೆ ಅವರ ಸಹಪಾಠಿ ಕೆ.ವಿ. ಕೃಷ್ಣ ಭಟ್ ಕಡಂದಲೆ ಉಪಸ್ಥಿತರಿರುವರು ಎಂದರು.

3.30ರಿಂದ ಸಮಾರೋಪ ಸಮಾರೋಪ ನಡೆಯಲಿದ್ದು, ಉಡುಪಿಯ ಅದಮಾರು ಮಠದ ವಿಶ್ವಪ್ರಿಯ ಶ್ರೀಪಾದ ಅಧ್ಯಕ್ಷತೆ ವಹಿಸುವರು. ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ನುಡಿನಮನ ಸಲ್ಲಿಸುವರು. ರಂಗಕರ್ಮಿ ಎಸ್.ಎನ್. ಸೇತುರಾಮ್ ಸಮಾರೋಪ ಭಾಷಣ ಮಾಡುವರು. ವುಡ್ಲ್ಯಾಂಡ್ಸ್ ಹೋಟೆಲ್ ಮಾಲೀಕ ವೈ. ರಮೇಶ್ ಭಟ್, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ ಐತಾಳ್, ಗೋಪಾಲಕೃಷ್ಣ ಭಟ್ ತಂತ್ರಿ ಮಡಂತ್ಯಾರು, ಬನ್ನಂಜೆ ಅವರ ಶಿಷ್ಯ ನಂದಕಿಶೋರ ಸುರತ್ಕಲ್ ಅದಮಾರು ಶಿಕ್ಷಣ ಸಂಸ್ಥೆಗಳ ಸಮಿತಿ ಮುಖ್ಯಸ್ಥ ಓಂಪ್ರಕಾಶ್ ಭಟ್ ಅವರಿಗೆ ಬನ್ನಂಜೆ ಗೌರವ ಸನ್ಮಾನ ನೀಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಕುಪಲತಿ ಪ್ರೊ.ಪಿ.ಎಲ್. ಧರ್ಮ ಭಾಗವಹಿಸುವರು ಎಂದು ತಿಳಿಸಿದರು.

5.30ರಿಂದ ಬೆಂಗಳೂರಿನ ವಿದ್ಯಾಭೂಷಣ ಮತ್ತು ತಂಡದವರು ‘ಬನ್ನಂಜೆ ಸಂಗೀತ ಲೋಕ’ ಕಾರ್ಯಕ್ರ ನಡೆಸಿಕೊಡುವರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮುಖ್ಯಸ್ಥೆ ವೀಣಾ ಬನ್ನಂಜೆ ಭಾಗವಹಿಸುವರು ಎಂದರು.

ವಿಶ್ವ ಬನ್ನಂಜೆ 90ರ ನಮನ ಮಂಗಳೂರು ಸಮಿತಿಯ ಗೌರವಾದ್ಯಕ್ಷ ಎಂ.ಬಿ. ಪುರಾಣಿಕ, ಕಾರ್ಯಾದ್ಯಕ್ಷ ಸುಧಾಕರ ಪೇಜಾವರ, ಉಪಾಧ್ಯಕ್ಷರಾದ ಉದ್ಯಮಿ ರತ್ನಾಕರ ಜೈನ್, ಎಂ. ರವೀಂದ್ರ ಶೇಟ್, ಸನತ್ ಕುಮಾರ್ ಜೈನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.