ಉಜಿರೆ: ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ನಿಲ್ದಾಣ ಕಾಮಗಾರಿ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿದ್ದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.

2023ರಲ್ಲಿ ₹12 ಕೋಟಿ ವೆಚ್ಚದಲ್ಲಿ ಆರಂಭಗೊಂಡ ಪ್ರಥಮ ಹಂತದ ಕಾಮಗಾರಿಯೇ ಅಪೂರ್ಣವಾಗಿದ್ದು ಸದ್ಯ ಸ್ಥಗಿತಗೊಂಡಿದೆ. ಹೊಂಡಗಳಲ್ಲಿ ಕೊಳಚೆ ನೀರು ನಿಂತಿದ್ದು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಕಾಮಗಾರಿಗೆ ಬಳಸಿರುವ ಕಬ್ಬಿಣ ತುಕ್ಕು ಹಿಡಿಯುತ್ತಿದೆ.

ಪಕ್ಕದಲ್ಲೆ ಹಳೆ ಬಸ್ನಿಲ್ದಾಣ, ಅರಣ್ಯ ಇಲಾಖೆ ಕಚೇರಿ, ಪೊಲೀಸ್ ಠಾಣೆ, ತಾಲ್ಲೂಕು ಕಚೇರಿ ಹಾಗೂ ಅನೇಕ ಮಳಿಗೆಗಳಿದ್ದು ನಿತ್ಯವೂ ಸಾವಿರಾರು ಜನ ಸಂಚರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜನರು ಓಡಾಟ ನಡೆಸುತ್ತಿದ್ದಾರೆ.

‘ಸುಮಾರು 1.2 ಎಕರೆ ಜಾಗದಲ್ಲಿ ₹12 ಕೋಟಿ ವೆಚ್ಚದಲ್ಲಿ ಬಸ್ನಿಲ್ದಾಣ ನಿರ್ಮಾಣವಾಗಲಿದೆ ಎಂದು ಆರಂಭದಲ್ಲಿ ಪ್ರಕಟಿಸಲಾಗಿತ್ತು. ಅರಣ್ಯ ಇಲಾಖೆ ಕಚೇರಿ ಇರುವ ಜಾಗವನ್ನು ಇನ್ನೂ ಕೆಎಸ್ಆರ್ಟಿಸಿಗೆ ಹಸ್ತಾಂತರಿಸಿಲ್ಲ’ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.