ಬಿಗ್ ಬಾಸ್... ಬಿಗ್ ಬಾಸ್... ಮ್ಯೂಸಿಕ್ ಸಮೇತ ಹಾಡು ಕೇಳಲಾರಂಭಿಸಿತು.

‘ಇಲ್ಲಿ ಕೇಳಿ, ಒಂಟಿಯೋ ಜಂಟಿಯೋ ತಕ್ಷಣಕ್ಕೆ ಗಂಟು–ಮೂಟೆ ಕಟ್ಟಿಕೊಂಡು ಮಹಾದ್ವಾರದಿಂದ ನಿಷ್ಕ್ರಮಿಸಿ’ ಹೆಣ್ಣು ಧ್ವನಿ ಗುಡುಗಿತು.

‘ಬಿಗ್ ಬಾಸ್, ಇದೇನು ನಿಮ್ಮ ವಾಯ್ಸ್ ಚೇಂಜ್ ಆಗಿದೆ. ಬೇಸ್ ವಾಯ್ಸ್ ಹೋಗಿ, ನೈಸ್ ವಾಯ್ಸ್ ಆಗಿದೆಯಲ್ಲ’ ತಲೆಹರಟೆ ಸ್ಪರ್ಧಿಯೊಬ್ಬ ಕೇಳಿದ.

‘ನಾನು ಬಿಗ್ ಬಾಸ್ ಅಲ್ಲ. ಗವರ್ನ್ಮೆಂಟ್ ಆಫೀಸರ್, ತಹಶೀಲ್ದಾರ್’.

ಇದೂ ಒಂದು ಟಾಸ್ಕ್ ಇರಬೇಕೆಂದು ಭಾವಿಸಿದ ಸ್ಪರ್ಧಿಗಳು, ‘ನೀವು ಹೊರಡಿ ಎಂದಾಕ್ಷಣ ಗಂಟುಮೂಟೆ ಕಟ್ಟಲು ನಾವಿಲ್ಲಿ ಬಂದಿಲ್ಲ, ಜನರಿಗೆ ನಾವೇನು ಅಂತ ತೋರಿಸೋಕೆ ಇಲ್ಲಿಗೆ ಬಂದಿದೀವಿ’ ಎಂದು ಅರಚಿದರು.

ಇವರಿಗೆ ‘ಬಿಗ್ ಬಾಸ್’ ಭಾಷೆಯಲ್ಲೇ ಹೇಳಬೇಕೇನೋ ಎಂದುಕೊಂಡ ತಹಶೀಲ್ದಾರ್, ‘ನೀವೆಲ್ಲರೂ ನಾನು ಕೊಟ್ಟ ಟಾಸ್ಕ್ನಲ್ಲಿ ಫೇಲ್ ಆಗಿದ್ದೀರಿ, ಅದಕ್ಕೆ ಹೊರಡಿ’ ಎಂದರು.

‘ಅದೆಲ್ಲ ಆಗಲ್ಲ, ಮೊದಲು ನೀವು ನೋಟಿಸ್ ಕೊಡಬೇಕಿತ್ತು’.

‘ನಾವು ನೋಟಿಸ್ ಕೊಟ್ಟಿದ್ದೆವು. ಅದನ್ನು ನೀವು ನಾಮಿನೇಷನ್ ಅಷ್ಟೇ ಎಂದು ಭಾವಿಸಿ ನಿರ್ಲಕ್ಷಿಸಿದಿರಿ’.

‘ಅಂದ್ರೆ, ಬಿಗ್ ಬಾಸ್ ಹೆಸರಲ್ಲಿ ನಿಮ್ಮದು ವೈಲ್ಡ್ ಕಾರ್ಡ್ ಎಂಟ್ರಿಯಾ?’

‘ಇಲ್ಲ, ಗವರ್ನಮೆಂಟ್ ಆರ್ಡರ್ ಎಂಟ್ರಿ’ ನಕ್ಕರು ತಹಶೀಲ್ದಾರ್.

‘ಹೊರಗೆ ಹಾಕುವಂತಹ ತಪ್ಪು ನಾವೇನು ಮಾಡಿದ್ದೀವಿ’.

‘ಮಾಲಿನ್ಯ ಮಾಡಿದ್ದೀರಿ. ಕ್ಲೀನ್ ಇಂಡಿಯಾ ಟಾಸ್ಕ್ನಲ್ಲಿ ಫೇಲ್ ಆಗಿದ್ದೀರಿ’.

‘ಹಹಹ...’ ವಜ್ರಮುನಿಯವರ ಸ್ಟೈಲ್ನಲ್ಲಿ ನಕ್ಕ ಸ್ಪರ್ಧಿಯೊಬ್ಬ, ‘ನೀವು ಮಾಲಿನ್ಯವನ್ನೇ ಮಾಡುವುದಿಲ್ಲವೇ? ನಿಮಗೆ ಆರ್ಡರ್ ಕೊಡಲು ಹೇಳಿದವರೂ ಮಾಲಿನ್ಯ ಮಾಡಿ ಲ್ಲವೇ? ಸರ್ಕಾರವೇ ಮಾಲಿನ್ಯಮಯವಲ್ಲವೇ?’ ಎಂದ.

‘ಇದು ಅತಿಯಾಯ್ತು, ಹೊರಡಿ, ನಾನು ಬೀಗ ಹಾಕಬೇಕು’ ಎಂದರು ಆಫೀಸರ್.

ಹೋರಾಟಗಾರ್ತಿ ಸ್ಪರ್ಧಿಯೊಬ್ಬಳು ಚೇರ್ ಮೇಲೆ ನಿಂತು ಕೇಳಿದಳು, ‘ಇದು ಕಾನೂನು ಬೀಗವೋ, ಕಾನೂನಿನ ಹೆಸರಿನಲ್ಲಿ ಹಾಕಿದ ರಾಜಕೀಯ ಬೀಗವೋ?’

ತಹಶೀಲ್ದಾರ್ಗೆ ಪಿತ್ತ ನೆತ್ತಿಗೇರಿತು, ‘ರೀ ಮೇಡಂ, ಆಟ ಬಿಟ್ಟು ವಾಸ್ತವಕ್ಕೆ ಬನ್ನಿ, ಇಡೀ ಬಿಗ್ ಬಾಸ್ ಮನೆಯೇ ಎಲಿಮಿನೇಟ್ ಆಗಿದೆ. ಹೊರಡಿ ಸಾಕು’ ಎಂದು ಎಲ್ಲರನ್ನೂ ಹೊರಕಳಿಸಿ ಮಹಾದ್ವಾರಕ್ಕೆ ಬೀಗ ಜಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.