ಮಂಗಳೂರು: ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರ ಬೆಂದ್ರ್ ತೀರ್ಥಕ್ಕೆ ಶತಮಾನಗಳ ಐತಿಹ್ಯವಿದ್ದು, ಪ್ರವಾಸಿಗರನ್ನು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಸೀರೆ ಹೊಳೆಯ ಎಡ ಭಾಗದಲ್ಲಿರುವ ಈ ತೀರ್ಥ ಕೆರೆಯ ನೀರು ಸಾಮಾನ್ಯ ನೀರಿಗಿಂತ ಹೆಚ್ಚು ಉಷ್ಣಾಂಶ ಹೊಂದಿದೆ. ಹೊಳೆಯ ಬಲ ಭಾಗದ ತುಸು ದೂರದಲ್ಲೇ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನವೂ ಇರುವುದರಿಂದ ಪ್ರೇಕ್ಷಣೀಯ ಸ್ಥಳವಾಗಿದೆ.

ಸೀರೆ ಹೊಳೆಯ ಬಲ ಬದಿಯ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಎಡ ಬದಿಯ ಬೆಂದ್ರ್ ತೀರ್ಥ ಕ್ಷೇತ್ರಕ್ಕೆ ಸಮರ್ಪಕವಾದ ಸಂಪರ್ಕ ವ್ಯವಸ್ಥೆಯೇ ಇಲ್ಲ. ಸದ್ಯಕ್ಕೆ ತೂಗು ಸೇತುವೆಯನ್ನೇ ಅವಲಂಬಿಸುವಂತಾಗಿದೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ನಿರ್ಮಿಸಲಾದ ತೂಗು ಸೇತುವೆಯು ಬೆಂದ್ರ್ ತೀರ್ಥದಿಂದ ವ್ಯಕ್ತಿಯೊಬ್ಬರ ಜಾಗ ಸಂಪರ್ಕಿಸುತ್ತಿದ್ದು, ಅಲ್ಲಿಂದ ದೇವಸ್ಥಾನಕ್ಕೆ ನಡೆದುಕೊಂಡು ಹೋಗಬೇಕಿದೆ. ನದಿ ದಂಡೆಯ ಅಂಚಿನಲ್ಲಿ ಸೂಕ್ತ ತಡೆಗೋಡೆಯೂ ಇಲ್ಲ ಇದರಿಂದ ದೇವಸ್ಥಾನಕ್ಕೆ ತೆರಳಲು ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರತಿ ವರ್ಷ ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆಯ ದಿನ ಇಲ್ಲಿ ವಿಶೇಷ ತೀರ್ಥಸ್ನಾನ ಸೇವೆ ನಡೆಯುತ್ತದೆ. ಈ ಬಾರಿ ಆ.23ರಂದು ತೀರ್ಥಸ್ನಾನ ಸೇವೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಕ್ಷೇತ್ರದ ಅಭಿವೃದ್ಧಿಗಾಗಿ ರೂಪುಗೊಂಡಿರುವ ‘ಶಿವಾಜಿ ಯುವ ಸೇನೆ ಬೆಂದ್ರ್ ತೀರ್ಥ’ ಸಂಘಟನೆಯು ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೆರೆಯ ಸ್ವಚ್ಛತೆ, ಸೂಚನಾ ಫಲಕ, ಸಮಗ್ರ ನಿರ್ವಹಣೆಯನ್ನು ಸಂಘಟನೆಗಳು ನಿರ್ವಹಿಸುತ್ತಿದೆ. ಆದರೂ ಸರ್ಕಾರದಿಂದ ಗಮನಾರ್ಹ ನೆರವು ಬಂದಿಲ್ಲ.

ಫೆಬ್ರುವರಿಯಲ್ಲಿ ಗ್ರಾಮದ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಕಟ್ಟೆ ಪೂಜೆ, ಶ್ರಾವಣ ಮಾಸದಲ್ಲಿ ವಿಶೇಷ ತೀರ್ಥಸ್ನಾನ, ನವರಾತ್ರಿ ಸಂದರ್ಭ ಗ್ರಾಮದ ಶಾರದಾ ವಿಸರ್ಜನೆ ಬೆಂದ್ರ್ ತೀರ್ಥ ಕೆರೆಯಲ್ಲೇ ನಡೆಯುತ್ತದೆ. ಈ ಕಾರಣದಿಂದ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎಂಬುದು ಭಕ್ತರ ಒತ್ತಾಯ.

‘ಹಲವು ತಜ್ಞರು ಬಂದು ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಇದುವರೆಗೆ ಇಲ್ಲಿನ ಮೂಲಸವಲತ್ತುಗಳಲ್ಲಿ ಸುಧಾರಣೆ ಆಗಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಸ್ಥಳೀಯ ಸಂಘಟನೆಗಳು ಮಾಡುತ್ತಿವೆಯೇ ಹೊರತು ಸರ್ಕಾರ ಗಮನ ಹರಿಸುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯೂ ಗಮನ ಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬಿಸಿನೀರಿನ ಚಿಲುಮೆ ಇರುವ ಈ ಕ್ಷೇತ್ರವನ್ನು ಸಂರಕ್ಷಿಸಬೇಕು’ ಎಂದು ಸ್ಥಳೀಯ ನಿವಾಸಿ ಧನ್ಯರಾಜ್ ಬಾಳೆ ಹಿತ್ಲು ಒತ್ತಾಯಿಸಿದರು.

ಇಲ್ಲಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಇಲ್ಲಿನ ವಸತಿ ಗೃಹವೂ ಬಳಕೆಗೆ ಯೋಗ್ಯವಾಗಿಲ್ಲ. ಸರ್ಕಾರದ ಅನುದಾನದಿಂದ ಹಲವು ವರ್ಷಗಳ ಹಿಂದೆಯೇ ವಸತಿಗೃಹ ನಿರ್ಮಿಸಲಾಗಿದೆ. ಆದರೆ, ಅಧಿಕೃತವಾಗಿ ಕಟ್ಟಡವನ್ನು ಇದುವರೆಗೂ ಉದ್ಘಾಟಿಸಿಲ್ಲ. ಆರಂಭದಲ್ಲಿ ವಸತಿ ಗೃಹಕ್ಕೆ ನಿರ್ವಾಹಕರನ್ನೂ ನೇಮಿಸಲಾಗಿತ್ತು. ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಮರುನೇಮಕಾತಿ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಆ.23ರಂದು ತೀರ್ಥಸ್ನಾನ

ಆ.23ರಂದು ನಸುಕಿನ 4ರಿಂದ ತೀರ್ಥ ಸ್ನಾನ ನಡೆಯಲಿದೆ. ಸೀತಾ ದೇವಿಯನ್ನು ಲಂಕೆಯಿಂದ ಮರಳಿ ಅಯೋಧ್ಯೆಗೆ ಕರೆ ತರುವ ಸಂದರ್ಭ ಈ ಕೆರೆಯಲ್ಲಿ ದಂಪತಿ ಸ್ನಾನ ಮಾಡಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಇಂದಿಗೂ ನವದಂಪತಿಗಳು ಈ ಕ್ಷೇತ್ರಕ್ಕೆ ಬರುವುದು ವಾಡಿಕೆ. ಸೀರೆ ಹೊಳೆಯಲ್ಲಿ ಮಿಂದು, ಬೆಂದ್ರ್ ತೀರ್ಥ ಕೆರೆಯಲ್ಲಿ ಮೂರು ಬಾರಿ ಮಿಂದೇಳುವುದರಿಂದ ಚರ್ಮ ರೋಗವೂ ವಾಸಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಪುತ್ತೂರು ನಗರದಿಂದ 14 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ.

ಮೂಲ ಸವಲತ್ತು ಕಲ್ಪಿಸಿ

ಸರ್ಕಾರ ನಿರ್ಮಿಸಿರುವ ವಸತಿಗೃಹವನ್ನು ಸುಸಜ್ಜಿತಗೊಳಿಸಿ ಶಾಶ್ವತ ಮೇಲ್ವಿಚಾರಕರನ್ನು ನೇಮಿಸಬೇಕು. ಬೆಂದ್ರ್ ತೀರ್ಥ ಕೆರೆಯ ಬಳಿಯಿಂದ ದೇವಸ್ಥಾನಕ್ಕೆ ನೇರ ಸಂಪರ್ಕ ಮಾರ್ಗ ನಿರ್ಮಿಸಬೇಕು. ಪ್ರವಾಸಿಗರಿಗೆ ಮೂಲಸವಲತ್ತು ಕಲ್ಪಿಸಬೇಕು. ಪ್ರವಾಸಿಗರು ಕ್ಷೇತ್ರಕ್ಕೆ ಬರಲು ಸೂಕ್ತವಾದ ಸೂಚನಾ ಫಲಕ ಅಳವಡಿಸಬೇಕು. ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರವಾಸಿಗರು, ಸ್ಥಳೀಯರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.