ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮನಿರ್ದೇಶಿತ ಸದಸ್ಯನ ವಜಾಕ್ಕೆ ಸರ್ಕಾರಕ್ಕೆ ಪತ್ರ: ಮಂಗಳೂರು ಮೇಯರ್

Published : 31 ಆಗಸ್ಟ್ 2024, 14:06 IST
Last Updated : 31 ಆಗಸ್ಟ್ 2024, 14:06 IST
ಫಾಲೋ ಮಾಡಿ
Comments

ಮಂಗಳೂರು: 'ಬಸ್‌ಗೆ ಕಲ್ಲು ತೂರಿ, ಸಾರ್ವಜನಿಕ ಆಸ್ತಿ–ಪಾಸ್ತಿ ಹಾನಿ ಮಾಡಿರುವ ಮಹಾನಗರ ಪಾಲಿಕೆಯ ನಾಮ ನಿರ್ದೇರ್ಶಿತ ಸದಸ್ಯ ಕಾಂಗ್ರೆಸ್‌ನ ಕಿಶೋರ್‌ ಶೆಟ್ಟಿ ವಜಾಗೊಳಿಸುವಂತೆ ಒತ್ತಾಯಿಸಿ, ಎಫ್‌ಐಆರ್ ಪ್ರತಿಯೊಂದಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಮಹಾನಗರ ಪಾಲಿಕೆಯ ಸಾಮಾನ್ಯಸಭೆ ಮೊಟಕುಗೊಳಿಸಿದ ಮೇಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ವೇಲೆ ಸರ್ವಿಸ್ ಬಸ್‌ಗೆ ಕಲ್ಲು ಎಸೆದು, ಬಸ್‌ ಹಾನಿಗೊಳಿಸಿದ್ದಾರೆ. ಬಸ್‌ನಲ್ಲಿದ್ದ ಮಹಿಳೆಗೂ ಗಾಯವಾಗಿದೆ. ಪಾಲಿಕೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ‘ಸಾರ್ವಜನಿಕ ಆಸ್ತಿ–ಪಾಸ್ತಿಗೆ ನಷ್ಟ ಮಾಡುವುದಿಲ್ಲ’ ಎಂದು ಹೇಳಿ ಪ್ರಮಾಣ ಮಾಡುವ ಸದಸ್ಯರೇ ಈ ರೀತಿ ಮಾಡಿದ್ದು, ಹೇಯಕೃತ್ಯವಾಗಿದೆ’ ಎಂದರು.

‘ಮುನ್ಸಿಪಲ್ ಕಾಯ್ದೆ ಪ್ರಕಾರ ಪ್ರತಿಪಕ್ಷದ ನಾಯಕ, ಮುಖ್ಯ ಸಚೇತಕ ಎಂಬ ಹುದ್ದೆಗಳು ಇಲ್ಲ. ಸಾಂಪ್ರದಾಯಿಕ ನಡೆದು ಬಂದ ಕ್ರಮವನ್ನು ಅನುಸರಿಸಲಾಗುತ್ತಿದೆ ಅಷ್ಟೆ. ಈ ಹಿಂದೆ ನಡೆದಿರುವ ಎಲ್ಲ ಸಭೆಗಳಲ್ಲಿ ಪ್ರತಿಪಕ್ಷದವರಿಗೆ ವಿಚಾರ ಮಂಡಿಸಲು ಅವಕಾಶ ನೀಡಿದ್ದು, ಈ ಬಾರಿ ಸಂಗೀತಾ ನಾಯಕ್ ಮುಂಚಿತವಾಗಿ ಪತ್ರ ನೀಡಿದ್ದ ಕಾರಣ ಅವರಿಗೆ ಅವಕಾಶ ನೀಡಲಾಯಿತು. ನಂತರ ಪ್ರತಿಪಕ್ಷದವರಿಗೂ ಅವಕಾಶ ನೀಡುತ್ತಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೂರ್ತಿ ಸ್ಥಾಪನೆ ಸಂಬಂಧ ಸೆ.2ಕ್ಕೆ ಸಭೆ ನಡೆಸಲಾಗುವುದು. ನಗರದ ರಸ್ತೆಯಲ್ಲಿ ಆಗಿರುವ ಹೊಂಡಗಳನ್ನು ಗಣೇಶ ಚತುರ್ಥಿ ವೇಳೆ ಮುಚ್ಚಲಾಗುವುದು ಎಂದು ಹೇಳಿದರು.

ಉಪಮೇಯರ್ ಸುನೀತಾ, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT