ಬುಧವಾರ, ಮಾರ್ಚ್ 29, 2023
29 °C
ಆಳ್ವಾಸ್ ಕಾಲೇಜಿನ ಸಾಹಿತ್ಯ ಸಂಘ

ಪುಸ್ತಕವನ್ನು ಸ್ನೇಹಿತರಂತೆ ನೋಡಿ: ರೇಖಾ ಬನ್ನಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡುಬಿದಿರೆ: ‘ಪುಸ್ತಕವನ್ನು ಸ್ನೇಹಿತರಾಗಿ ಯಾರು ನೋಡುತ್ತಾರೋ, ಅವರು ಯಾವತ್ತೂ ಬದುಕಿಗೆ ಬೆನ್ನು ಹಾಕಲ್ಲ’ ಎಂದು ಲೇಖಕಿ, ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ ರೇಖಾ ವಿ. ಬನ್ನಾಡಿ ಹೇಳಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ 2021-22 ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯದ ಓದು ಪ್ರಶ್ನಿಸುವ ಗುಣವನ್ನು ನೀಡುತ್ತದೆ. ಎಷ್ಟು ಅಪ್ರಿಯವಾದರೂ ಸತ್ಯವನ್ನು ಹೇಳುವ ತಾಕತ್ತನ್ನು ನೀಡುತ್ತದೆ. ಆತ್ಮವಿಶ್ವಾಸದ ಜತೆಗೆ ಜಗತ್ತನ್ನು ಪ್ರೀತಿಸುವ, ಸಹಬಾಳ್ವೆಯನ್ನು ಆಶಿಸುವ ಹಾಗೂ ಜೀವನ ಪ್ರೀತಿಯನ್ನು ಕರಗತಗೊಳಿಸುವ ಶಕ್ತಿಯನ್ನು ನೀಡುತ್ತದೆ. ಒಳ್ಳೆಯ ಓದುಗನಿಗೆ ಒಂಟಿತನ ಎಂದೂ ಕಾಡುವುದಿಲ್ಲ’ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಸದಾಕತ್ ಮಾತನಾಡಿ, ’ವಿಜ್ಞಾನದ ಬೆಳವಣಿಗೆಯ ಜತೆಯಲ್ಲಿ ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯು ನಡೆಯುತ್ತಿರಬೇಕು. ಮನುಷ್ಯ ಮಾನವೀಯತೆಯನ್ನು ಸದಾ ತನ್ನ ಪರಮಧರ್ಮವೆಂದು ಭಾವಿಸಿ ಬದುಕಬೇಕು’ ಎಂದರು. ಧಮೇಂದ್ರ ಕುದ್ರೋಳಿ ಸ್ವಾಗತಿಸಿದರು. ಸಾಹಿತ್ಯ ಸಂಘದ ಸಂಯೋಜಕಿ ಸುಧಾರಾಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಆಶಾ ನಿರೂಪಿಸಿದರು. ಅಮೃತ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು