ಸೋಮವಾರ, ಜನವರಿ 18, 2021
25 °C

ಜಾನಪದ- ವೈದಿಕ ಎರಡೂ ಒಂದೇ; ಕೃತಿ ಬಿಡುಗಡೆಗೊಳಿಸಿದ ಕೆ.ಎಲ್. ಕುಂಡಂತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಜಾನಪದ ಮತ್ತು ವೈದಿಕ ಪರಸ್ಪರ ವಿರೋಧವಲ್ಲ, ಅವೆರಡು ಒಂದೇ’ ಎಂದು ವಿದ್ವಾಂಸ ಕೆ. ಲಕ್ಷ್ಮೀನಾರಾಯಣ ಕುಂಡಂತಾಯ ಹೇಳಿದರು.

ಕದ್ರಿ ದೇಗುಲದ ಅರ್ಚಕ ವಿದ್ವಾನ್ ಪ್ರಭಾಕರ ಅಡಿಗರು ಬರೆದಿರುವ ಸಂಹಿತಾ- ಪದ- ಕ್ರಮ- ಜಟಾ- ಘನ ಪಾಠ ಸಹಿತವಾಗಿರುವ ‘ಶ್ರೀ ಚಮಕಾಭರಣಂ’ ಕೃತಿಯನ್ನು ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವೇದಕಾಲದಲ್ಲಿಯೇ ಚಾರ್ವಾಕನಂತಹ ವೇದ ವಿರೋಧಿಗಳಿದ್ದರು. ಈ ಕಾಲದಲ್ಲಿ ವೇದ ವಿರೋಧ ದೊಡ್ಡ ವಿಚಾರವಲ್ಲ. ಜಾನಪದ ಮತ್ತು ವೈದಿಕ ವಿರುದ್ಧ ದಿಕ್ಕಿನಲ್ಲಿದೆ ಎಂದು ವಾದ ನಡೆಯುತ್ತಲೇ ಬಂದಿದೆ. ಆದರೆ ಅವರೆರಡು ಸುಗಮ ಸಮಾಗಮವಾಗಿದೆ. ಅವೆರಡೂ ಒಂದೇ ಎಂದು ವಿಶ್ಲೇಷಿಸಿದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕಬ್ಬಿಣದ ಕಡಲೆಯಾದ ವೇದದ ಧರ್ಮಜ್ಞಾನವನ್ನು ದಾಸವರೇಣ್ಯರು ಸುಲಭ, ಸರಳರೂಪದಲ್ಲಿ, ವಚನಗಳ ಮೂಲಕ ಸಮಾಜಕ್ಕೆ ತಿಳಿಸಿದರು. ವಿಕೃತವನ್ನೂ ವೈಭವೀಕರಿಸುವುದು, ವಿಷವನ್ನು ಹಂಚುವುದು ಸಾಹಿತ್ಯವಲ್ಲ. ಸದ್ವಿಚಾರ ಹಂಚುವುದೇ ಸಾಹಿತ್ಯ. ಇಂಥ ಕೃತಿಗಳು ಸದ್ವಿಚಾರ ಪಸರಿಸುತ್ತದೆ ಎಂದರು.

ಕುಂಜತ್ತೋಡಿ ವಾಸುದೇವ ಅಲೆವೂರಾಯ, ಡಾ.ಸುಧೀಂದ್ರ, ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಮಾತನಾಡಿದರು. ಪ್ರಕಾಶಕ ರಘುರಾಮಪ್ರಸಾದ್ ಪಿದಮಲೆ ಅವರನ್ನು ಅಭಿನಂದಿಸಲಾಯಿತು. ಅನುಪಮಾ ಅಡಿಗ ಇದ್ದರು. ಪ್ರಭಾಕರ ಅಡಿಗ ಕೃತಿ ಪರಿಚಯಿಸಿದರು. ಸುಧಾಕರ ರಾವ್ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು