ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕದ ಮಾಹಿತಿ ಮುಂದಿನ ಪೀಳಿಗೆಗೆ ದಾಖಲೆ: ಡಾ.ಎಂ.ಮೋಹನ ಆಳ್ವ 

‘ಕಂಬಳ ಶ್ರೀ’ ಕೃತಿ ಬಿಡುಗಡೆ
Published : 14 ಫೆಬ್ರುವರಿ 2024, 3:12 IST
Last Updated : 14 ಫೆಬ್ರುವರಿ 2024, 3:12 IST
ಫಾಲೋ ಮಾಡಿ
Comments

ಮೂಡುಬಿದಿರೆ: ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಬಗ್ಗೆ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದ ‘ಕಂಬಳ ಶ್ರೀ’ ಚೊಚ್ಚಲ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಂಗಳವಾರ ಬಿಡುಗಡೆ ಮಾಡಿದರು.

ಕಂಬಳ ಕ್ಷೇತ್ರದಲ್ಲಿ ಶ್ರೀನಿವಾಸ ಗೌಡ ಮಾಡಿದ ಸಾಧನೆ ದಾಖಲೆ ರೂಪದಲ್ಲಿ ಬಂದಾಗ ಮಾತ್ರ ಅದು ಮುಂದಿನ ಪೀಳಿಗೆಗೂ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಪ್ರೇಮಶ್ರೀ ಮಾಡಿರುವುದು ಶ್ಲಾಘನೀಯ ಎಂದರು.

ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಂಬಳ ಅಕಾಡೆಮಿಯ ಮೊದಲ ಬ್ಯಾಚ್‌ನ ತರಬೇತುದಾರ ಶ್ರೀನಿವಾಸ ಗೌಡ ಐಕಳ ಬಾವ ಕಂಬಳದಲ್ಲಿ ದಾಖಲೆ ಮಾಡಿ ಗಮನಸೆಳೆದಾಗ ಹೆಚ್ಚು ಖುಷಿ ಪಟ್ಟವ ನಾನು. ಕಂಬಳದ ಸಾಧಕರೊಬ್ಬರು ಚಿನ್ನಾಭರಣ ಮಳಿಗೆಗೆ ರಾಯಭಾರಿಯಾಗಿರುವುದು ಕಂಬಳ ಕ್ಷೇತ್ರಕ್ಕೆ ಸಂದ ದೊಡ್ಡ ಗೌರವ. ಅವರ ಸಾಧನೆಯನ್ನು ಗುರುತಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಉತ್ತಮ ಕಾರ್ಯ ಎಂದರು.

ಬಿಜೆಪಿ ಮುಖಂಡ ಸುದರ್ಶನ್ ಎಂ.ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತಿ ಜಯಂತಿ ಎಸ್.ಬಂಗೇರ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅರುಣ್ ಪ್ರಕಾಶ್‌ ಶೆಟ್ಟಿ, ಉದ್ಯಮಿ ಸಿ.ಎಚ್.ಗಫೂರ್, ಎಸ್‌ಕೆಆರ್‌ಡಿಪಿಯ ಮೇಲ್ವಿಚಾರಕ ವಿಠಲ್, ಪ್ರೆಸ್‌ಕ್ಲಬ್‌ ಅಧ್ಯಕ್ಷ ಯಶೋಧರ ಬಂಗೇರ, ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಲ್ಯಾಣಿ ಭಾಗವಹಿಸಿದ್ದರು.

ಪ್ರೇಮಶ್ರೀ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ ನಿರೂಪಿಸಿದರು. ಹರೀಶ್ ಆದೂರು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT