ಸಂಸ್ಥೆಯ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ನವೀನ್ ಕುಮಾರ್ ಗುಪ್ತ ಪಾಂಡೇಶ್ವರದ ಬಿಎಸ್‌ಎನ್‌ಎಲ್ ಕಚೇರಿಯ ಆವರಣದಲ್ಲಿ ಜಾಥಾವನ್ನು ಉದ್ಘಾಟಿಸಿದರು. ಸ್ಟೇಟ್‌ಬ್ಯಾಂಕ್, ಗಡಿಯಾರ ಗೋಪುರ, ಎ.ಬಿ.ಶೆಟ್ಟಿ ವೃತ್ತದ ಮಾರ್ಗವಾಗಿ ಸಾಗಿದ ಜಾಥಾ ಮತ್ತೆ ಬಿಎಸ್‌ಎನ್ಎಲ್ ಕಚೇರಿಗೆ ಮರಳಿತು. ಜಾಥಾದಲ್ಲಿ ಹೆಜ್ಜೆ ಹಾಕಿದ ಸಂಸ್ಥೆಯ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಹಾಗೂ ವಿವಿಧ ಫ್ರಾಂಚೈಸಿಗಳ ಸಿಬ್ಬಂದಿ ಬಿಎಸ್‌ಎನ್‌ಎಸ್ ಸಾಧನೆಗಳನ್ನು ಬಿಂಬಿಸುವ ಫಲಕಗಳನ್ನು ಪ್ರದರ್ಶಿಸಿದರು.