ಸುಬ್ರಹ್ಮಣ್ಯ: ಮಡಿಕೇರಿ ಗಾಳಿಬೀಡು-ಕಡಮಕಲ್-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿ ಮತ್ತು ಕಡಮಕಲ್ ನಿವಾಸಿಗಳ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಮಡಿಕೇರಿ ಶಾಸಕ ಮಂತರ್ಗೌಡ ಕಡಮಕಲ್ನಲ್ಲಿ ಸಮಾಲೋಚನಾ ಸಭೆ ನಡೆಸಿದರು.

ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದ ಮುಖಂಡರು, ಗ್ರಾಮಸ್ಥರು, ಮಡಿಕೇರಿ–ಗಾಳಿಬೀಡು, ಕಡಮಕಲ್– ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅಗತ್ಯ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದರು.

ಬಳಿಕ ಮಂತರ್ ಗೌಡ ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ಮೊಬೈಲ್ ಟವರ್ ನಿರ್ಮಾಣ, ರಸ್ತೆ ಅಭಿವೃದ್ಧಿ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಡಿಕೇರಿ-ಗಾಳಿಬೀಡು-ಕಡಮಕಲ್-ಸಂಪರ್ಕ ರಸ್ತೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಮುಂದಿನ ಬಜೆಟ್ನಲ್ಲಿ ಅನುದಾನ ಇರಿಸಲಾಗುವುದು. ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಪ್ರವೀಣ್ ಮುಂಡೋಡಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಕೆ ಹರಿಪ್ರಸಾದ್, ಪುಷ್ಪ ಪೂನಾಚ್ಚ, ತೆಣ್ಣೀರ ಮೈನಾ, ಸ್ಥಳೀಯರಾದ ಭವಾನಿಶಂಕರ್ ಪಿಂಡಿಮನೆ, ಸೋಮಶೇಖರ್ ಕಡಮಕಲ್, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಲದಾಳು, ಶೇಖರ್ ಅಂಬೆಕಲ್ಲು, ನರೇಂದ್ರ ಬಿಳಿಮಲೆ, ಗುರು ಚರಣ್ ಕೊಪ್ಪಡ್ಕ, ವೀಣಾನಂದ ಬಿಳಿಮಲೆ, ದಿನೇಶ್ ಕುಮಾರ್ ಮಡ್ತಿಲ, ಸತೀಶ್ ಕೊಮ್ಮೆಮನೆ, ಶರತ್ ಕಡಮಕಲ್, ರವಿಕುಮಾರ್ ಕಿರಿಭಾಗ, ಮಂಜುನಾಥ್ ಮಡ್ತಿಲ, ರವೀಂದ್ರ ರುದ್ರಪಾದ, ರಾಮಕೃಷ್ಣ ಹರಿಹರ, ದ ಕಮಲಾಕ್ಷ ಕೊಲ್ಲಮೊಗ್ರು,, ಪವನ್ ಕೋನಡ್ಕ, ಪರಮೇಶ್ವರ್ ಕೆಂಬಾರೆ, ರಂಜಿತ್ ಪೈಕ, ಪರಮೇಶ್ವರ್ ನಾಯ್ಕ ಚಣಿಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.