ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು | ಬಸ್ ಮಗುಚಿ ಚಾಲಕ ಸಾವು: 55 ಮಂದಿಗೆ ಗಾಯ

Published 19 ಮಾರ್ಚ್ 2024, 13:27 IST
Last Updated 19 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ಕಾಸರಗೋಡು: ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಮಗುಚಿ ಚಾಲಕ ಮೃತಪಟ್ಟು 55 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಚಾಲಿಂಗಾಲ್ ಮೊಟ್ಟ ಎಂಬಲ್ಲಿನ ತಿರುವಿನಲ್ಲಿ ಮಗುಚಿದೆ. ಚಾಲಕ, ಪಾರೆಕಟ್ಟೆ ವಿವೇಕಾನಂದ ನಗರದ ನಿವಾಸಿ ಚೇತನ್ ಕುಮಾರ್ (36) ಮೃತಪಟ್ಟವರು. ಬಸ್ ನಿರ್ವಾಹಕ ಪಯ್ಯನ್ನೂರು ನಿವಾಸಿ ಶಶಿಧರನ್, ಪ್ರಯಾಣಿಕ, ಕೋಳವಯಲ್ ಇಟ್ಟಮ್ಮಲ್ ನಿವಾಸಿ ಅಬ್ದುಲ್ ರಹಮಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಲಾ ಮಕ್ಕಳ ಸಹಿತ 53 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರು ಅಗ್ನಿಶಾಮಕದಳದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿದರು. ಚೇತನ್ ಕುಮಾರ್ ಅವರು ಶಶಿಧರ-ಸುಮಾ ದಂಪತಿ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT