ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಕಾರ್ಯಕ್ರಮದ ವಿದ್ಯಾರ್ಥಿ ಆಯೋಜಕ ಬ್ರಿಯಾನ್ ಬಾನ್ಸ್, ‘ಸ್ಥಳೀಯ ಬೇಕರಿ ಉದ್ಯಮಿಗಳು ಹಾಗೂ ಇತರ ಕಿರುಉದ್ಯಮಿಗಳಿಗೆ ವೇದಿಕೆ ಕಲ್ಪಿಸಲು ಚಾಕೋಲೇಟ್ ಸ್ಟ್ರೀಟ್ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದ್ದೇವೆ. ಇದರ ಐದನೇ ಆವೃತ್ತಿಯ ಉದ್ಘಾಟನೆ ಇದೇ 11ರಂದು ಮಧ್ಯಾಹ್ನ 12ಕ್ಕೆ ನೆರವೇರಲಿದೆ. ಓಷನ್ ಪರ್ಲ್ ಹೋಟೆಲ್‌ಗಳ ಬಳಗದ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ದುರೈ ಅರುಣ್ ಪ್ರಶಾಂತ್ ಸೆಲ್ವಂ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ನಿರ್ದೇಶಕ ರೋಷನ್ ಕೋಲಾರ ಭಾಗವಹಿಸಲಿದ್ದಾರೆ‘ ಎಂದರು.